ಪಿಎನ್ ಬಿ ಎಫೆಕ್ಟ್: 91 ಸುಸ್ತಿದಾರರಿಗೆ ಭಾರತ ಬಿಟ್ಟು ತೆರಳುವುದಕ್ಕೆ ನಿರ್ಬಂಧ?

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪರಿಣಾಮವೇನೋ ಎಂಬಂತೆ ಕೇಂದ್ರ ಸರ್ಕಾರ ಬೃಹತ್ ಮೊತ್ತದ ಸಾಲ ಮರುಪಾವತಿ ಮಾಡಬೇಕಿರುವ 91 ಸುಸ್ತಿದಾರರಿಗೆ ಭಾರತ ಬಿಟ್ಟು ತೆರಳುವುದಕ್ಕೆ ನಿರ್ಬಂಧ ವಿಧಿಸುವ
ಪಿಎನ್ ಬಿ ಎಫೆಕ್ಟ್: 91 ಸುಸ್ತಿದಾರರಿಗೆ ಭಾರತ ಬಿಟ್ಟು ತೆರಳುವುದಕ್ಕೆ ನಿರ್ಬಂಧ?
ಪಿಎನ್ ಬಿ ಎಫೆಕ್ಟ್: 91 ಸುಸ್ತಿದಾರರಿಗೆ ಭಾರತ ಬಿಟ್ಟು ತೆರಳುವುದಕ್ಕೆ ನಿರ್ಬಂಧ?
Updated on
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪರಿಣಾಮವೇನೋ ಎಂಬಂತೆ ಕೇಂದ್ರ ಸರ್ಕಾರ ಬೃಹತ್ ಮೊತ್ತದ ಸಾಲ ಮರುಪಾವತಿ ಮಾಡಬೇಕಿರುವ 91 ಸುಸ್ತಿದಾರರಿಗೆ ಭಾರತ ಬಿಟ್ಟು ತೆರಳುವುದಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
ದೇಶ ಬಿಟ್ಟು ತೆರಳುವುದಕ್ಕೆ ನಿರ್ಬಂಧಕ್ಕೊಳಪಡುವವರ ಹೆಸರಿನ ಪಟ್ಟಿಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದ್ದು, 91 ಜನರ ಹೆಸರಿದೆ ಎಂದು ಹೇಳಲಾಗಿದೆ. ದೇಶಬಿಟ್ಟು ತೆರಳದಂತೆ ನಿರ್ಬಂಧ ವಿಧಿಸುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪ್ರಾರಂಭಿಸುವಂತೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆದೇಶ ನೀಡಿದ್ದು, 50 ಕೋಟಿಗೂ ಹೆಚ್ಚು ಮೊತ್ತದ ಸಾಲ ಮರುಪಾವತಿ ಮಾಡಬೇಕಿರುವವರ ಪಾಸ್ಪೋರ್ಟ್ ಮಾಹಿತಿಯನ್ನು ಹಂಚಿಕೊಳ್ಳುವಂತೆ ಸೂಚನೆ ನೀಡಿದೆ. 
ನೀರವ್ ಮೋದಿ ಪ್ರಕರಣದ ನಂತರ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಅದರ ಮಾಲಿಕರಿಗೆ ಬ್ಯಾಂಕ್ ಗಳು ಬೃಹತ್ ಮೊತ್ತದ ಸಾಲ ನೀಡಿ ಮರಳಿ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com