'ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ': ಹೊಸ ಪಕ್ಷ ಸ್ಥಾಪಸಿದಿ ಟಿಟಿವಿ ದಿನಕರನ್
ದೇಶ
'ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ': ಹೊಸ ಪಕ್ಷ ಸ್ಥಾಪಸಿದ ಟಿಟಿವಿ ದಿನಕರನ್
ನಟ ರಜನಿಕಾಂತ್ ಹಾಗೂ ಕಮಲ್ ಹಾಸನ್ ಹೊಸ ಪಕ್ಷ ಸ್ಥಾಪನೆ ಮಾಡಿದ ಬಳಿಕ ತಮಿಳುನಾಡಿನಲ್ಲಿ ಮತ್ತೊಂದು ಹೊಸ ಪಕ್ಷ ಸ್ಥಾಪನೆಗೊಂಡಿದ್ದು...
ಚೆನ್ನೈ: ನಟ ರಜನಿಕಾಂತ್ ಹಾಗೂ ಕಮಲ್ ಹಾಸನ್ ಹೊಸ ಪಕ್ಷ ಸ್ಥಾಪನೆ ಮಾಡಿದ ಬಳಿಕ ತಮಿಳುನಾಡಿನಲ್ಲಿ ಮತ್ತೊಂದು ಹೊಸ ಪಕ್ಷ ಸ್ಥಾಪನೆಗೊಂಡಿದ್ದು, ಎಐಎಡಿಎಂಕೆ ಬಂಡುಕೋರ ನಾಯಕ ಟಿಟಿವಿ ದಿನಕರನ್ ಅವರು, ತಮ್ಮ ಹೊಸ ಪಕ್ಷಕ್ಕೆ 'ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ' ಎಂದು ಹೆಸರಿಟ್ಟಿದ್ದಾರೆ.
ಮಧುರೈನ ಮೆಲೂರ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆರ್'ಕೆ ನಗರ ಶಾಸಕ ಟಿಟಿವಿ ದಿನಕರನ್ ಅವರು ತಮ್ಮ ಹೊಸ ಪಕ್ಷ ಹಾಗೂ ಪಕ್ಷದ ಧ್ವಜನ್ನು ಘೋಷಣೆ ಮಾಡಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಭಾವಚಿತ್ರ ಹೊಂದಿರುವ ಧ್ವಜವನ್ನು ಅಮ್ಮ ಮಕ್ಕಳ್ ಮುನ್ನೇತ ಕಳಗಂ ಪಕ್ಷ ಒಳಗೊಂಡಿದೆ.
ಹೊಸ ಪಕ್ಷ ಘೋಷಣೆ ಮಾಡಿದ ಬಳಿಕ ಮಾತನಾಡಿರುವ ದಿನಕರನ್ ಅವರು, ಮೂಲ ಎಐಎಡಿಎಂಕೆ ಪಕ್ಷದ ಎರಡೆಲೆ ಚಿಹ್ನೆಯನ್ನು ದ್ರೋಹಿಗಳಿಂದ ಮರಳಿ ಪಡೆಯುವರೆಗೂ ನಮ್ಮ ನೂತನ ಪಕ್ಷದ ಚಿಹ್ನೆಯು ಕುಕ್ಕರ್ ಆಗಿರುತ್ತದೆ ಎಂದು ದಿನಕರನ್ ಅವರು ಹೇಳಿದ್ದಾರೆ.
ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆಯ ಚುನಾವಣೆಯಲ್ಲಿ ನಾವು ಗೆಲವು ಸಾಧಿಸಲಿದ್ದೇವೆಂದು ತಿಳಿಸಿದ್ದಾರೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ನಿಧನ ಹೊಂದಿದ ಬಳಿಕ ತೆರವಾದ ರಾಧಾಕೃಷ್ಣ ನಗರ (ಆರ್.ಕೆ.ನಗರ) ವಿಧಾನಸಭಾ ಕ್ಷೇತ್ರಕ್ಕೆ ಕಳೆದ ವರ್ಷ ಡಿ.21 ರಂದು ಮತದಾನ ನಡೆದಿತ್ತು. ಉಪ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ದಿನಕರನ್ ಅವರು ಗೆಲವು ಸಾಧಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ