ಕೊನೆಗೂ ಟಿಡಿಪಿ ಎಚ್ಚರಗೊಂಡಿತು: ಆಂಧ್ರ ಸಿಎಂ ನಾಯ್ಡು ಕುರಿತು ಜಗನ್ ಮೋಹನ್ ರೆಡ್ಡಿ ವ್ಯಂಗ್ಯ

ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದರ ಕುರಿತಂತೆ ವೈಎಸ್ಆರ್'ಸಿಪಿ ಹಲವು ವರ್ಷಗಳಿಂದ ಸುದೀರ್ಘ ಹೋರಾಗ ನಡೆಸಿದ ಬಳಿಕ ದೇಶ ಹಾಗೂ ಟಿಡಿಪಿ ಇದೀಗ ಎಚ್ಚರಗೊಂಡಿದೆ ಎಂದು ವೈಎಸ್ಆರ್'ಸಿಪಿ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಯವರು ಶುಕ್ರವಾರ ಹೇಳಿದ್ದಾರೆ...
ವೈಎಸ್ಆರ್'ಸಿಪಿ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ
ವೈಎಸ್ಆರ್'ಸಿಪಿ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ
ನವದೆಹಲಿ: ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದರ ಕುರಿತಂತೆ ವೈಎಸ್ಆರ್'ಸಿಪಿ ಹಲವು ವರ್ಷಗಳಿಂದ ಸುದೀರ್ಘ ಹೋರಾಗ ನಡೆಸಿದ ಬಳಿಕ ದೇಶ ಹಾಗೂ ಟಿಡಿಪಿ ಇದೀಗ ಎಚ್ಚರಗೊಂಡಿದೆ ಎಂದು ವೈಎಸ್ಆರ್'ಸಿಪಿ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಯವರು ಶುಕ್ರವಾರ ಹೇಳಿದ್ದಾರೆ. 
ತೆಲುಗು ದೇಶಂ ಪಕ್ಷ (ಟಿಡಿಪಿ) ಕೇಂದ್ರದ ಆಡಳಿತಾರೂಢ ಎನ್'ಡಿಎ ಪಕ್ಷದೊಂದಿಗಿನ ಮೈತ್ರಿ ತೊರೆದಿರುವ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಜಗನ್ ಮೋಹನ್ ರೆಡ್ಡಿಯವರು, ರಾಜ್ಯದ ಜನತೆಯ ಸಹಾಯದೊಂದಿಗೆ ವಿಶೇಷ ಸ್ಥಾನಮಾನಕ್ಕಾಗಿ ವೈಎಸ್ಆರ್'ಸಿಪಿ ನಡೆಸುತ್ತಿದ್ದ ಹೋರಾಟದಿಂದ ಕೊನೆಗೂ ಸಿಎಂ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಸೇರಿದಂತೆ ದೇಶ ಎಚ್ಚರಗೊಂಡಿದೆ ಎಂದು ಹೇಳಿದ್ದಾರೆ. 
ರಾಜಕೀಯ ಮಾರ್ಗದರ್ಶನದ ಬಳಿಕವೂ, ಟಿಡಿಪಿ ಮತ್ತೆ ವೈಎಸ್ಆರ್'ಸಿಪಿಯ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆಯ ನಿರ್ಣಯವನ್ನೇ ಅನುಸರಿಸಬೇಕಾಯಿತು. ಇದು ಪ್ರಜಾಪ್ರಭುತ್ವ ಹಾಗೂ ಆಂಧ್ರಪ್ರದೇಶದ ಗೆಲುವಾಗಿದೆ. ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಹೋರಾಟ ಹಾಗೂ ಆಂಧ್ರಪ್ರದೇಶ ಜನರ ಹಕ್ಕುಗಳ ಹೋರಾಟದಲ್ಲಿ ವೈಎಸ್ಆರ್'ಸಿಪಿ ಗೆಲವು ಸಾಧಿಸಲಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com