ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಒಗ್ಗೂಡುವಂತೆ ಮಮತಾ ಒತ್ತಾಯ

ಕೇಂದ್ರದ ಎನ್ ಡಿಎ ಮೈತ್ರಿ ತೊರೆದಿರುವ ತೆಲುಗು ದೇಶಂ ಪಾರ್ಟಿಯ ನಿರ್ಧಾರವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವಾಗತಿಸಿದ್ದು, ಬಿಜೆಪಿ ವಿರುದ್ಧ ಎಲ್ಲಾ ಪ್ರತಿಪಕ್ಷಗಳು ಒಗ್ಗೂಡುವಂತೆ ಕರೆ ನೀಡಿದ್ದಾರೆ
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Updated on

ಸಿಲಿಗುರಿ:  ಕೇಂದ್ರದ ಎನ್ ಡಿಎ ಮೈತ್ರಿ ತೊರೆದಿರುವ ತೆಲುಗು ದೇಶಂ ಪಾರ್ಟಿಯ ನಿರ್ಧಾರವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವಾಗತಿಸಿದ್ದು, ಬಿಜೆಪಿ ವಿರುದ್ಧ ಎಲ್ಲಾ ಪ್ರತಿಪಕ್ಷಗಳು ಒಗ್ಗೂಡುವಂತೆ ಕರೆ ನೀಡಿದ್ದಾರೆ.

ಎಲ್ಲ ರಾಜ್ಯಗಳು ಒಂದಲ್ಲಾ ಒಂದು ರೀತಿಯ ತೊಂದರೆ ಸಮಸ್ಯೆ ಎದುರಿಸುತ್ತಿರುವಂತೆ ಟಿಡಿಪಿಯೂ  ಸಮಸ್ಯೆ ಎದುರಿಸುತ್ತಿದ್ದು, ಇದೀಗ ಎನ್ ಡಿಎ ಮೈತ್ರಿಯಿಂದ ಹೊರಬಂದಿರುವುದು ಸರಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಸಂಸದರು ಹಾಗೂ ನಾಯಕರೊಂದಿಗೆ ಬಿಜೆಪಿ ಸಭೆ ನಡೆಸಿದ ಬಳಿಕ ಟಿಡಿಪಿ ಎನ್ ಡಿಎ ಮೈತ್ರಿಕೂಟದಿಂದ ಹೊರಬರುವ ನಿರ್ಧಾರವನ್ನು ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಘೋಷಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com