ರಾಷ್ಟ್ರಗೀತೆಯಲ್ಲಿ 'ಸಿಂಧು' ತೆಗೆದು 'ಈಶಾನ್ಯ' ಸೇರಿಸುವಂತೆ ರಾಜ್ಯಸಭೆಯಲ್ಲಿ ನಿರ್ಣಯ ಮಂಡನೆ

ರಾಷ್ಟ್ರಗೀತೆಯಲ್ಲಿ ಸಿಂಧು ಪದವನ್ನು ತೆಗೆದು ಈಶಾನ್ಯ ವಲಯದ ಪದ ಬಳಸುವಂತೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸಂಸದ ರಿಪುನ್ ಬೊರಾ ರಾಜ್ಯಸಭೆಯಲ್ಲಿ ಖಾಸಗಿ ನಿರ್ಣಯ ಮಂಡಿಸಿದ್ದಾರೆ.
ಕಾಂಗ್ರೆಸ್ ಸಂಸದ ರಿಪುನ್ ಬೊರಾ
ಕಾಂಗ್ರೆಸ್ ಸಂಸದ ರಿಪುನ್ ಬೊರಾ

ನವದೆಹಲಿ: ರಾಷ್ಟ್ರಗೀತೆಯಲ್ಲಿ ಸಿಂಧು ಪದವನ್ನು ತೆಗೆದು ಈಶಾನ್ಯ ವಲಯದ ಪದ ಬಳಸುವಂತೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸಂಸದ ರಿಪುನ್ ಬೊರಾ ರಾಜ್ಯಸಭೆಯಲ್ಲಿ ಖಾಸಗಿ ನಿರ್ಣಯ ಮಂಡಿಸಿದ್ದಾರೆ.

ಸಿಂಧು ಪದ ಸಿಂಧು ಪ್ರಾಂತ್ಯವನ್ನು ಪ್ರತಿನಿಧಿಸುತ್ತದೆ. ಆದರೆ, ಅದು ಬಹಳ ಕಾಲದಿಂದಲೂ ಭಾರತದ ಭಾಗವಾಗಿದ್ದರೂ ಪಾಕಿಸ್ತಾನದಲ್ಲಿದೆ. ಆದ್ದರಿಂದ ಅದನ್ನು ತೆಗೆದುಹಾಕಿ, ಈಶಾನ್ಯ ವಲಯ ಪ್ರತಿನಿಧಿಸುವ ಪದ ಸೇರಿಸಬೇಕು, ಇದಕ್ಕಾಗಿ ರಾಷ್ಟ್ರ ಗೀತೆಗೆ ತಿದ್ದುಪಡಿ ಮಾಡಿ ಪದ ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ.

ಈಶಾನ್ಯ ಭಾರತದ ಪ್ರಮುಖ ಭಾಗವಾಗಿದ್ದರೂ ರಾಷ್ಟ್ರಗೀತೆಯಲ್ಲಿ ಸೇರದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಆದರೆ, ಪಾಕಿಸ್ತಾನದಲ್ಲಿರುವ ಸಿಂಧುವನ್ನು ಉಲ್ಲೇಖಿಸಿರುವುದು ದೇಶಕ್ಕೆ ಪ್ರತಿಕೂಲವಾಗಲಿದೆ ಎಂದು ಹೇಳಿದ್ದಾರೆ.

ರಾಷ್ಟ್ರಗೀತೆ ಜನಗಣ ಮನದಲ್ಲಿನ ತಿದ್ದುಪಡಿ ಮಾಡುವ ಸಂಬಂಧ ಭಾರತ ಸರ್ಕಾರ ಕ್ರಮ ಕೈಗೊಳ್ಳಬಹುದೆಂದು ಸ್ವಾತಂತ್ರ್ಯ ಭಾರತದ ಮೊದಲ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಹೇಳಿಕೆ ನೀಡಿದ್ದಾರೆ ಎಂದು  ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com