ಯೂರೋಪಿಯನ್ ಒಕ್ಕೂಟದ ಮಾದರಿ ಚೀನಾ ಜೊತೆ ಟಿಬೆಟ್ ಕೂಡ ಅಸ್ತಿತ್ವದಲ್ಲಿರಬಹುದು: ದಲೈ ಲಾಮ

ಯುರೋಪಿಯನ್ ಒಕ್ಕೂಟದ ಮಾದರಿಯಲ್ಲಿ ಟಿಬೆಟ್ ಸಹ ಚೀನಾದೊಂದಿಗೆ ಅಸ್ತಿತ್ವದಲ್ಲಿರಬಹುದು ಎಂದು ಬೌದ್ಧ ಧರ್ಮಗುರು ದಲೈಲಾಮ ಅಭಿಪ್ರಾಯಟ್ಟಿದ್ದಾರೆ.
ದಲೈ ಲಾಮ
ದಲೈ ಲಾಮ
ಬೀಜಿಂಗ್: ಯುರೋಪಿಯನ್ ಒಕ್ಕೂಟದ ಮಾದರಿಯಲ್ಲಿ ಟಿಬೆಟ್ ಸಹ ಚೀನಾದೊಂದಿಗೆ ಅಸ್ತಿತ್ವದಲ್ಲಿರಬಹುದು ಎಂದು ಬೌದ್ಧ ಧರ್ಮಗುರು ದಲೈಲಾಮ ಅಭಿಪ್ರಾಯಟ್ಟಿದ್ದಾರೆ. 
ಭಾರತದಲ್ಲಿ ಆಶ್ರಯ ಪಡೆದಿರುವ ಬೌದ್ಧ ಧರ್ಮಗುರು ದಲೈ ಲಾಮ, ತಾವು ಎಂದಿಗೂ ಯುರೋಪಿಯನ್ ಒಕ್ಕೂಟದ  ಚೈತನ್ಯವನ್ನು ಮೆಚ್ಚುತ್ತೇನೆ, ಕೇವಲ ಒಂದು ರಾಷ್ಟ್ರದ ಹಿತದೃಷ್ಟಿಯಿಂದ ಸಮಾಜದ ಹಿತಾಸಕ್ತಿ ಮುಖ್ಯ, ಚೀನಾದ ಪೀಪಲ್ಸ್ ರಿಪಬ್ಲಿಕ್ ನೊಟ್ಟಿಗೆ ಇರಲು ನನ್ನ ಸಹಮತವಿದೆ ಎಂದು ದಲೈ ಲಾಮ ಹೇಳಿದ್ದಾರೆ. 
ವಾಷಿಂಗ್ ಟನ್ ಮೂಲದ ಸಂಸ್ಥೆಯಾದ ಟಿಬೆಟ್ ಗಾಗಿ ಅಂತಾರಾಷ್ಟ್ರೀಯ ಅಭಿಯಾನದ 30 ನೇ ವರ್ಷಾಚರಣೆಗೆ ವಿಡಿಯೋ ಸಂದೇಶ ರವಾನೆ ಮಾಡಿರುವ ದಲೈ ಲಾಮ ಈ ಹೇಳಿಕೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯದ ನಾಯಕರು ದಲೈ ಲಾಮ ಅವರನ್ನು ಭೇಟಿ ಮಾಡದಂತೆ ಚೀನಾ ಒತ್ತಡ ಹೇರುತ್ತಿದ್ದು, ಟಿಬೆಟ್ ನ್ನು ತನ್ನ ಹಿಡಿತದಲ್ಲೇ ಇಟ್ಟುಕೊಳ್ಳಲು ಚೀನಾ ಯತ್ನಿಸುತ್ತಿದೆ. ಈ ಬೆನ್ನಲ್ಲೇ  ಯೂರೋಪಿಯನ್ ಒಕ್ಕೂಟದ ಮಾದರಿ ಚೀನಾ ಜೊತೆ ಟಿಬೆಟ್ ಕೂಡ ಅಸ್ತಿತ್ವದಲ್ಲಿರಬಹುದು ಎಂದು ದಲೈ ಲಾಮ ಹೇಳಿರುವುದು ಅಚ್ಚರಿ ಮೂಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com