ರೈತರಿಗೆ ಘೋಷಿತ ಕನಿಷ್ಟ ಬೆಂಬಲ ಬೆಲೆ ಸಿಗುವಂತೆ ಮಾಡಲು ಕಾರ್ಯೋನ್ಮುಖ: ಪ್ರಧಾನಿ ಮೋದಿ

ರೈತರಿಗೆ ಬೆಂಬಲ ಬೆಲೆ ನೀಡಲು ರಾಜ್ಯಗಳೊಂದಿಗೆ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.
ನರೇಂದ್ರಮೋದಿ
ನರೇಂದ್ರಮೋದಿ

ನವದೆಹಲಿ: ರೈತರಿಗೆ ಬೆಂಬಲ ಬೆಲೆ ನೀಡಲು ರಾಜ್ಯಗಳೊಂದಿಗೆ ಕೇಂದ್ರಸರ್ಕಾರ ಕಾರ್ಯೋನ್ಮುಖವಾಗಿದೆ  ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.
ಉತ್ಪಾದನಾ ವೆಚ್ಚದಲ್ಲಿ 1.5 ರಂತೆ   ಬೆಂಬಲ ಬೆಲೆ ನೀಡಲಾಗುತ್ತಿದ್ದು, ರೈತರ ಆದಾಯ ದುಪ್ಪಟ್ಟುಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಈ ವಿಚಾರದಲ್ಲಿ ಗೊಂದಲಕಾರಿ ಪರಿಸ್ಥಿತಿ ಸೃಷಿಸುವ ಮೂಲಕ ಜನರನ್ನು ಹಾದಿತಪ್ಪಿಸಲಾಗುತ್ತಿದೆ ಎಂದು ಪ್ರಧಾನಿ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಹಾಗೂ ಉತ್ಪನ್ನ ವೆಚ್ಚವನ್ನು ನಿರ್ಧರಿಸಲಿದ್ದು, 2022ರವೇಳೆಗೆ ರೈತರ ಆದಾಯ ದುಪ್ಪಟ್ಟುಗೊಳ್ಳಲಿದೆ ಎಂದು ನರೇಂದ್ರಮೋದಿ ತಿಳಿಸಿದ್ದಾರೆ.

ಪುಸಾ ಕೃಷಿ ಸಂಕಿರಣದಲ್ಲಿ ಕೃಷಿ ಉನ್ನತಿ ಮೇಳ 2018ನ್ನುದ್ದೇಶಿಸಿ ಮಾತನಾಡಿದ ಅವರು. ರೈತರು ತೈಲೋತ್ಪನ್ನಗಳನ್ನು ಹೆಚ್ಚಿಗೆ ಬೆಳೆಯುವ ಮೂಲಕ ದೇಶ   ಅಡುಗೆ ಅನಿಲವನ್ನು ಆಮದಿಗಾಗಿ ಬೇರೆ ದೇಶವನ್ನು ಅವಲಂಬಿಸಿರುವುದನ್ನು ತಪ್ಪಿಸಬೇಕೆಂದು ಕರೆ ನೀಡಿದರು.

2022 ರ ವೇಳೆಗೆ ಯೂರಿಯಾ ಬಳಕೆ ಪ್ರಮಾಣವನ್ನು ಕನಿಷ್ಠ ಅರ್ಧದಷ್ಟಾದರೂ ತಗ್ಗಿಸಬೇಕು.  ಬೆಳಗಳಿಗೆ ಬೆಂಕಿ ಹಚ್ಚುವುದಿಂದ ವಾಯುಮಾಲಿನ್ಯ ಹಾಗೂ ಭೂಮಿ ಸಾರ ಕಳೆದುಹೋಗುವುದರಿಂದ ಇದನ್ನು ತಡೆಗಟ್ಟುವಂತೆ ರೈತರಿಗೆ ಪ್ರಧಾನಿ ಮನವಿ ಮಾಡಿದರು.

ರೈತರಿಗೆ ಉತ್ತಮ ತಳಿಯ ಬೀಜ ಹಾಗೂ ವಿದ್ಯುತ್ ಪೂರೈಸಲು ಸರ್ಕಾರ ಹಗಲು ರಾತ್ರಿ ಕೆಲಸ ಮಾಡುತ್ತಿದೆ.  ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡಲು ಮಾರ್ಕೆಟ್ ಗಳಲ್ಲಿ ಯಾವುದೇ ತೊಂದರೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜೈವಿಕ ಖೇಥಿ ಪೋರ್ಟಲ್ ಬಿಡುಗಡೆಗೊಳಿಸಿದ ಪ್ರಧಾನಿ 25 ಕೃಷಿ ವಿಜ್ಞಾನ ಕೇಂದ್ರಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕೃಷಿ ಕರ್ಮನ್ ಪ್ರಶಸ್ತಿ ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಕೃಷಿ ವಿಜ್ಞಾನ್ ಪ್ರೋತ್ಸಾಹ ಪುರಸ್ಕಾರವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

 ಈ ಮೇಳದಲ್ಲಿ  ಕೇಂದ್ರ ಹಾಗೂ ರಾಜಸರ್ಕಾರಗಳ ವತಿಯಿಂದ 800 ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಸೂಕ್ಷ್ಮ ನೀರಾವರಿ. ಪಶುಸಂಗೋಪನೆ, ಕುಕ್ಕೋಧ್ಯಮ ಮತ್ತಿತರ ಚಟುವಟಿಕೆಗಳ ಮೂಲಕ ಹೇಗೆ ಆದಾಯ ದುಪ್ಪಟ್ಟುಗೊಳಿಸಿಕೊಳ್ಳಬಹುದು ಎಂಬ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com