ಕೊಯ್ದ ಪೈರಿನ ಕೂಳೆ ದಹಿಸುವುದು ತಪ್ಪು: ರೈತರಿಗೆ ಪ್ರಧಾನಿ ನರೇಂದ್ರ ಮೋದಿ

ಉತ್ತರ ಭಾರತದಲ್ಲಿ ಸಾಮಾನ್ಯವಾಗಿರುವ ಕೊಯ್ದ ಪೈರಿನ ಕೂಳೆಗಳನ್ನು ಸುಟ್ಟು ಹಾಕುವ ಪದ್ಧತಿ ಇದ್ದು, ಈ ರೀತಿ ಮಾಡುವುದು ತಪ್ಪು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಉತ್ತರ ಭಾರತದಲ್ಲಿ ಸಾಮಾನ್ಯವಾಗಿರುವ ಕೊಯ್ದ ಪೈರಿನ ಕೂಳೆಗಳನ್ನು ಸುಟ್ಟು ಹಾಕುವ ಪದ್ಧತಿ ಇದ್ದು, ಈ ರೀತಿ ಮಾಡುವುದು ತಪ್ಪು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
ರೈತರು ಕೊಯ್ದ ಪೈರಿನ ಕೂಳೆಗಳನ್ನು ದಹಿಸದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಸಹ ಹಲವು ಕ್ರಮಗಳನ್ನು ಕೈಗೊಂಡಿದೆ. ಕೆಲವು ಪ್ರದೇಶಗಳಲ್ಲಿ ಕೊಯ್ದ ಪೈರಿನ ಕೂಳೆಗಳನ್ನು ದಹಿಸುವ ಪದ್ಧತಿ ಇದೆ. ನಾವು ಬೆಳೆ ಬೆಳೆದಾಗ ಮಣ್ಣು, ಗಾಳಿ, ಬೆಳಕುಗಳಿಂದ ಪೌಷ್ಟಿಕಾಂಶ ದೊರೆಯುತ್ತದೆ. ಆದರೆ ಕೊಯ್ದ ಪೈರಿನ ಕೂಳೆಯನ್ನು ದಹನ ಮಾಡುವುದರಿಂದ ಎಲ್ಲಾ ಪೌಷ್ಠಿಕಾಂಶಗಳನ್ನೂ ನಾಶ ಮಾಡುತ್ತಿದ್ದೆವೆ, ಅಷ್ಟೇ ಅಲ್ಲದೇ ಇದರಿಂದ ವಾಯುಮಾಲಿನ್ಯವೂ ಹೆಚ್ಚಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 
ಕೃಷಿ ಉನ್ನತಿ ಮೇಳದ ಮೂಲಕ ರೈತರಿಗೆ ಕೊಯ್ದ ಪೈರಿನ ಕೂಳೆಗಳನ್ನು ದಹಿಸದಂತೆ ಮನವಿ ಮಾಡುತ್ತೇನೆ, ಮುಂದಿನ ಬೆಳೆಗೆ ಸಹಕಾರಿಯಾಗುವಂತೆ ಕೂಳೆಗಳನ್ನು ತೆಗೆಯುವುದಕ್ಕೆ ಅಗತ್ಯವಿರುವ ಉಪಕರಣಗಳ ಖರೀದಿಗೆ ಸರ್ಕಾರ ಹಣಕಾಸಿನ ನೆರವು ನೀಡುತ್ತದೆ ಎಂದು ರೈತರಿಗೆ ಮೋದಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com