ಸಂಸ್ಥಾಪಕರ ಕಲ್ಪನೆಯಂತೆ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್ ರಾಜಕೀಯ ನಿರ್ಣಯ: ಖರ್ಗೆ

ಸಮಾನ ಮನಸ್ಕ ಪಕ್ಷಗಳೊಂದಿಗೆ ಸಹಕಾರಕ್ಕಾಗಿ ಪ್ರಾಯೋಗಿಕ ವಿಧಾನ ಅಳವಡಿಸಿಕೊಳ್ಳಲು ಸಂಸ್ಥಾಪಕರ ಕಲ್ಪನೆಯಂತೆ ರಾಜಕೀಯ ನಿರ್ಣಯವನ್ನು ಕಾಂಗ್ರೆಸ್ ಅಂಗೀಕರಿಸಿದೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಸಾಮಾನ್ಯ ಕಾರ್ಯಕ್ರಮ  ವಿಸ್ತರಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಸಹಕಾರಕ್ಕಾಗಿ ಪ್ರಾಯೋಗಿಕ ವಿಧಾನ ಅಳವಡಿಸಿಕೊಳ್ಳಲು ಸಂಸ್ಥಾಪಕರ ಕಲ್ಪನೆಯಂತೆ ರಾಜಕೀಯ ನಿರ್ಣಯವನ್ನು ಕಾಂಗ್ರೆಸ್  ಅಂಗೀಕರಿಸಿದೆ.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಪ್ರಮುಖ ಪ್ರತಿಪಕ್ಷಗಳೊಂದಿಗೆ ಕಾಂಗ್ರೆಸ್  ಚುನಾವಣಾ ಪೂರ್ವ ಮೈತ್ರಿಗಾಗಿ ಪ್ರಯತ್ನಿಸುವ ರಾಜಕೀಯ ನಿರ್ಣಯವನ್ನು  ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿಂದು ನಡೆದ ಎಐಸಿಸಿಯ 84 ನೇ ಮಹಾ ಅಧಿವೇಶನದಲ್ಲಿ ಮಂಡಿಸಿದರು.

ಸಂವಿಧಾನಿಕ ಮೌಲ್ಯಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು, ಸರ್ಕಾರಿ ಸಂಸ್ಥೆಗಳು ಒತ್ತಡಕ್ಕೊಳಗಾಗಿ ತಮ್ಮ ಸ್ವಾತಂತ್ರ್ಯದೊಂದಿಗೆ ರಾಜೀ ಮಾಡಿಕೊಂಡಿವೆ ಎಂದು ಬಿಜೆಪಿ ಹಾಗೂ ಆರ್ ಎಸ್ ಎಸ್ ವಿರುದ್ಧ ದಾಳಿ ನಡೆಸಿದರು.

ದೇಶದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದ್ದು,  ಸಂವಿಧಾನದ ರಕ್ಷಣೆಗಾಗಿ ಯಾವ ತ್ಯಾಗಕ್ಕೂ ಸಿದ್ದರಿರಬೇಕಾದ ಅನೀವಾರ್ಯತೆ ಎದುರಾಗಿದೆ. ಗಣತಂತ್ರದ ಸಂಸ್ಥಾಪಕರ ಮೌಲ್ಯ ಆದರ್ಶಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು

ವೈವಿಧ್ಯಮಯ ಕಲೆ, ಧರ್ಮ, ಸಾಹಿತ್ಯ, ಸಂಸ್ಕೃತಿಯ ಜನರು ದೇಶದಲ್ಲಿ ವಾಸಿಸುತ್ತಿದ್ದು,   ಕೋಮುವಾದಿಗಳು, ಪ್ರತ್ಯೇಕತವಾದಿಗಳಿಂದ ಅಪಾಯ ಎದುರಾದಂತಹ ಸಂದರ್ಭದಲ್ಲಿ ಜನತೆಯ ರಕ್ಷಣೆ ಮಾಡಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ  ಎಂದರು

 ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರು, ಕಾರ್ಮಿಕರು,  ಅಸಂಘಟಿತ ವಲಯದ ಕೆಲಸಗಾರರು, ಸ್ವ ಉದ್ಯೋಗಿಗಳು, ದಲಿತರು, ವ್ಯಾಪಾರಿಗಳು, ಅಲ್ಪಸಂಖ್ಯಾತರು, ಬಡವರು ದ್ರೋಹಕ್ಕೊಳಗಾಗಿದ್ದಾರೆ.ಇವಿಎಂಗಳನ್ನು ತಿರುಚಲಾಗಿದೆ  ಎಂದು ನಿರ್ಣಯದಲ್ಲಿ ಆರೋಪಿಸಲಾಗಿದೆ.

ನಾಗರಿಕರ ಮೂಲಭೂತ ಹಕ್ಕು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದ್ದು, ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಬಿಜೆಪಿಗೆ ಎಚ್ಚರಿಕೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com