ಸ್ಪೈಸ್ ಜೆಟ್ ವಿಮಾನ
ಸ್ಪೈಸ್ ಜೆಟ್ ವಿಮಾನ

ಬೆಂಗಳೂರು ವಿಮಾನ ನಿಲ್ದಾಣ: ಸ್ಪೈಸ್ ಜೆಟ್ ವಿಮಾನದಿಂದ ರನ್ ವೇ ಅಂಚಿನ ದೀಪಕ್ಕೆ ಹಾನಿ

ಸ್ಪೈಸ್ ಜೆಟ್ ವಿಮಾನ ತಂಗಿದ ನಂತರ ರನ್ ವೇ ಬದಿಯಲ್ಲಿ ವಿದ್ಯುದೀಪಗಳನ್ನು ಹಾಳು ಮಾಡಿದ ....

ಬೆಂಗಳೂರು: ಸ್ಪೈಸ್ ಜೆಟ್ ವಿಮಾನ ತಂಗಿದ ನಂತರ ರನ್ ವೇ ಬದಿಯಲ್ಲಿ ವಿದ್ಯುದೀಪಗಳನ್ನು ಹಾಳು ಮಾಡಿದ ಕಾರಣ ಅರ್ಧ ಗಂಟೆಗೂ ಹೆಚ್ಚು ಕಾಲ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದ ಘಟನೆ ಕಳೆದ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಹೈದಾರಾಬಾದ್ ನಿಂದ ಆಗಮಿಸಿದ ಸ್ಪೈಸ್ ಜೆಟ್ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. ಸ್ಪೈಸ್ ಜೆಟ್ ವಿಮಾನ ತಂಗಿದ ನಂತರ ರನ್ ವೇಯಲ್ಲಿ ಕೆಲವು ದೀಪಗಳು ಹಾಳಾದ್ದರಿಂದ ಕೆಲ ಕಾಲ ವಿಮಾನ ಸಂಚಾರ ಸ್ಥಗಿತಗೊಂಡಿತು. ಕಳೆದ ರಾತ್ರಿ 10.47ರಿಂದ 11.28ರವರೆಗೆ ಕನಿಷ್ಠ 10 ವಿಮಾನಗಳ ಸಂಚಾರವನ್ನು ಬದಲಾಯಿಸಲಾಯಿತು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

ಕ್ಯು400 ವಿಮಾನದ ಜೊತೆಗೆ ಎಸ್ ಜಿ 1238 ವಿಮಾನ ಸಂಚರಿಸುತ್ತಿತ್ತು. ವಿಮಾನ ತಂಗುವ ಹೊತ್ತಿಗೆ ಎಡಕ್ಕೆ ತಿರುಗಿತು. ನಂತರ ಪೈಲಟ್ ವಿಮಾನವನ್ನು ಕೇಂದ್ರ ಭಾಗಕ್ಕೆ ಜೋಡಿಸಿದರು. ನಂತರ ತೀರಭಾಗಕ್ಕೆ ಹೋಗಿ ತಂಗಿತು. ಈ ಸಂದರ್ಭದಲ್ಲಿ ನಾಲ್ಕು ರನೇ ವೇ ದೀಪಗಳು ಹಾಳಾಗಿವೆ ಎಂದು ಸ್ಪೈಸ್ ಜೆಟ್ ವಕ್ತಾರರು ತಿಳಿಸಿದ್ದಾರೆ.

ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ರನ್ ವೇಯನ್ನು ಮುಚ್ಚುವ ಹೊತ್ತಿಗೆ 8 ವಿಮಾನಗಳನ್ನು ಚೆನ್ನೈಗೆ ಬದಲಾಯಿಸಲಾಯಿತು ಮತ್ತು ಇನ್ನೆರಡು ವಿಮಾನಗಳನ್ನು ತಿರುಚ್ಚಿ ಮತ್ತು ಕೊಯಮತ್ತೂರಿಗೆ ಕಳುಹಿಸಲಾಯಿತು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com