ಪ್ರಧಾನಿ ಮೋದಿ ಸೋಲಿಸಲು ಮಮತಾ ನೇತೃತ್ವದಲ್ಲಿ ತೃತೀಯ ರಂಗ ರಚನೆಗೆ ಜೇಠ್ಮಲಾನಿ ಕರೆ

ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಅಧಿಕಾರದಿಂದ....
ರಾಮ್ ಜೇಠ್ಮಲಾನಿ
ರಾಮ್ ಜೇಠ್ಮಲಾನಿ
ಇಂದೋರ್: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಅಧಿಕಾರದಿಂದ ದೂರವಿಡಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತೃತೀಯ ರಂಗ ರಚನೆಯಾಗಬೇಕು ಎಂದು ಭಾನುವಾರ ಕರೆ ನೀಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖ್ಯಾತ ಹಿರಿಯ ವಕೀಲ ಜೇಠ್ಮಲಾನಿ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ವಿದೇಶಗಳಲ್ಲಿರುವ ಕಪ್ಪು ಹಣವನ್ನು ವಾಪಸ್ ದೇಶಕ್ಕೆ ತರುವಲ್ಲಿ ವಿಫಲವಾಗಿವೆ ಎಂದಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಜಂಟಿಯಾಗಿ ದೇಶದ ಜನತೆಗೆ ಮೋಸ ಮಾಡುತ್ತಿವೆ. ಹೀಗಾಗಿ ಪ್ರಾಮಾಣಿಕ ನಾಯಕರನ್ನೊಳಗೊಂಡ ತೃತೀಯ ರಂಗ ರಚನೆಯಾಗುವ ಅಗತ್ಯ ಇದೆ ಎಂದು ಜೇಠ್ಮಲಾನಿ ಹೇಳಿದ್ದಾರೆ.
ಪ್ರಧಾನಿ ಮೋದಿಯನ್ನು ಸೋಲಿಸಲು ಮಮತಾ ಬ್ಯಾನರ್ಜಿ ತೃತೀಯ ರಂಗದ ನೇತೃತ್ವದ ವಹಿಸಕೊಳ್ಳಬೇಕು ಮತ್ತು ಅವರಿಗೆ ಆ ಸಾಮಾರ್ಥ್ಯ ಇದೆ ಎಂದು ಈ ಹಿಂದೆ ಮೋದಿಯನ್ನು ಬೆಂಬಲಿಸಿದ್ದ ಜೇಠ್ಮಲಾನಿ ಹೇಳಿದ್ದಾರೆ.
ಕಪ್ಪು ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಎನ್ ಡಿಎ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಜೇಠ್ಮಲಾನಿ, ಎನ್ ಡಿಎಗೆ ಅಧಿಕಾರದಲ್ಲಿ ಮುಂದುವರೆಯುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com