ಎಚ್ಚರ! ನಿಮ್ಮ ವಾಟ್ಸ್‌ಆ್ಯಪ್‌ನಲ್ಲಿನ ಮಾಹಿತಿಯನ್ನು ಕದಿಯಲಿದ್ದಾರೆ ಚೀನಾ ಹ್ಯಾಕರ್ಸ್: ಭಾರತೀಯ ಸೇನೆ

ಸಾಮಾಜಿಕ ಜಾಲತಾಣ ವಾಟ್ಸ್ಆ್ಯಪ್ ಮೂಲಕ ಭಾರತೀಯರ ಮಾಹಿತಿಯನ್ನು ಚೀನಾ ಹ್ಯಾಕರ್ಗಳು ಕದಿಯುವ ಸಾಧ್ಯತೆ ಇದೆ ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ...
ವಾಟ್ಸ್ಆ್ಯಪ್
ವಾಟ್ಸ್ಆ್ಯಪ್
ನವದೆಹಲಿ: ಸಾಮಾಜಿಕ ಜಾಲತಾಣ ವಾಟ್ಸ್ಆ್ಯಪ್ ಮೂಲಕ ಭಾರತೀಯರ ಮಾಹಿತಿಯನ್ನು ಚೀನಾ ಹ್ಯಾಕರ್ಗಳು ಕದಿಯುವ ಸಾಧ್ಯತೆ ಇದೆ ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ. 
ಭಾರತೀಯ ಸೇನೆಯು ಸಾರ್ವಜನಿಕ ಸಂಪರ್ಕ ಹೆಚ್ಚುವರಿ ಪ್ರಧಾನ ನಿರ್ದೇಶನಾಲಯ(ಎಡಿಜಿಪಿಐ) ಅಧಿಕೃತ ಟ್ವೀಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು ವಾಟ್ಸ್ಆ್ಯಪ್ ಬಳಕೆದಾರರು ಎಚ್ಚರಿಕೆ ವಹಿಸುವಂತೆ ವಿಡಿಯೋದಲ್ಲಿ ಸೂಚಿಸಲಾಗಿದೆ. 
ಚೀನಾ ಹ್ಯಾಕರ್ ಗಳು ನಿಮ್ಮ ಡಿಜಿಟಲ್ ಜಗತ್ತನ್ನು ಭೇದಿಸಲು ಎಲ್ಲ ವಿಧಾನಗಳನ್ನು ಬಳಸಲಿದ್ದಾರೆ. ನಿಮ್ಮ ಕಂಪ್ಯೂಟರನ್ನು ಹ್ಯಾಕ್ ಮಾಡಲು ಬಳಸುವ ಹೊಸ ವಿಧಾನ ವಾಟ್ಸ್ಆ್ಯಪ್ ಆಗಿರಲಿದೆ. +86ನಿಂದ ಆರಂಭಗೊಳ್ಳುವ ಚೀನಾದ ದೂರವಾಣಿ ಸಂಖ್ಯೆಗಳು ನಿಮ್ಮ ಗುಂಪುಗಳಿಗೆ ಲಗ್ಗೆಯಿಡಲಿದ್ದು ಎಲ್ಲ ದತ್ತಾಂಶಗಳನ್ನು ಕದಿಯಲಿವೆ ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ.
ನೀವು ನಿಮ್ಮ ದೂರವಾಣಿ ಸಂಖ್ಯೆ ಬದಲಿಸಿದರೆ ಅದನ್ನು ನಿಮ್ಮ ಗುಂಪಿನ ಅಡ್ಮಿನ್ ಗಮನಕ್ಕೆ ತಂದು. ಹಳೆಯ ವಾಟ್ಸ್ಆ್ಯಪ್ ಸಂಖ್ಯೆಯನ್ನು ಡಿಲೀಟ್ ಮಾಡಿ. ಸುರಕ್ಷತೆ ಮೊದಲು. ಎಚ್ಚರದಿಂದಿರಿ! ಸುರಕ್ಷಿತವಾಗಿರಿ! ಎಂದು ವಿಡಿಯೋದಲ್ಲಿ ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com