
ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕ್ಷಮೆ ಕೋರಿದ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷದ ಮಾಜಿ ಸಂಚಾಲಕಿ ಅಂಜಲಿ ದಾಮಾನಿಯಾ ಅವರ ಕ್ಷಮೆ ಕೋರಬೇಕೆಂದು ಆಮ್ ಆದ್ಮಿ ಪಕ್ಷದ ಮಾಜಿ ಸದಸ್ಯ ಮಾಯಾಂಕ್ ಗಾಂಧಿ ಒತ್ತಾಯಿಸಿದ್ದಾರೆ.
ನಿತಿನ್ ಗಡ್ಕರಿ ವಿರುದ್ಧ ಆರೋಪ ಮಾಡಲು ಅಂಜಲಿ ದಾಮಾನಿಯಾ ಅವರ ಮಾಹಿತಿ ಬಳಸಿಕೊಂಡಿದ್ದ ಅರವಿಂದ್ ಕೇಜ್ರಿವಾಲ್ ಕೂಡಲೇ ಕ್ಷಮೆ ಕೋರಬೇಕು. ಅಂಜಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ವಿಶ್ವಾಸವಿರುವುದಾಗಿ ಮಾಯಾಂಕ್ ಗಾಂಧಿ ಹೇಳಿದ್ದಾರೆ.
ಮಾಹಿತಿ ಹಕ್ಕು ಕಾರ್ಯಕರ್ತೆಯಾಗಿದ್ದ ಅಂಜಲಿ ದಾಮಾನಿಯಾ, ನಿತಿನ್ ಗಡ್ಕರಿ ಎನ್ ಸಿಪಿಯೊಂದಿಗೆ ಮೃಧು ಧೋರಣೆ ಹೊಂದಿದ್ದಾರೆ. ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಶರದ್ ಪವರ್ ಅವರೊಂದಿಗೆ ವ್ಯವಹಾರಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದರು.
ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಗಡ್ಕರಿ ಅವರನ್ನು ಭೇಟಿಯಾಗಲು ದಾಮಾನಿಯಾ ಪ್ರಯತ್ನಿಸಿದ್ದರೂ ನಿತಿನ್ ಗಡ್ಕರಿ ಅವಕಾಶ ಮಾಡಿಕೊಟ್ಟಿರಲಿಲ್ಲ. ಹಗರಣ ಬಯಲಿಗೆಳೆಯದಂತೆ ಗಡ್ಕರಿ ಒತ್ತಡ ಹೇರುತ್ತಿದ್ದರು ಎಂದು ಆಕೆ ಆರೋಪಿಸಿದ್ದರು.
ದಾಮಾನಿಯಾ ಅವರನ್ನು ಭೇಟಿಯಾಗಿಲ್ಲ ಎಂದು ಗಡ್ಕರಿ ಹೇಳುತ್ತಿದ್ದರು. ಗಡ್ಕರಿ ಹಾಗೂ ಪವಾರ್ ನಡುವಿನ ಸಂಬಂಧದ ಬಗ್ಗೆಗೂ ಬಿಜೆಪಿ ತಿರಸ್ಕರಿಸಿತ್ತು.
Advertisement