ಬಿಹಾರಕ್ಕೆ ವಿಶೇಷ ಸ್ಥಾನಮಾನ ಬೇಡಿಕೆ ಕೈ ಬಿಡಲ್ಲ- ನಿತಿಶ್ ಕುಮಾರ್

ಬಿಹಾರಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಕಳೆದ 13 ವರ್ಷಗಳಿಂದ ಈ ಕ್ಷಣದವರೆಗೂ ಹೋರಾಟ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ಬೇಡಿಕೆಯನ್ನು ಕೈ ಬಿಡಲ್ಲ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ನಿತೀಶ್ ಕುಮಾರ್
ನಿತೀಶ್ ಕುಮಾರ್

ಪಾಟ್ನಾ: ಬಿಹಾರಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಕಳೆದ 13 ವರ್ಷಗಳಿಂದ ಈ ಕ್ಷಣದವರೆಗೂ ಹೋರಾಟ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ಬೇಡಿಕೆಯನ್ನು ಕೈ ಬಿಡಲ್ಲ ಎಂದು ಮುಖ್ಯಮಂತ್ರಿ ನಿತಿಶ್  ಕುಮಾರ್ ಹೇಳಿದ್ದಾರೆ.

ಪಾಟ್ನಾದಲ್ಲಿಂದು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಒತ್ತಾಯಿಸಿ 2005ರಲ್ಲಿಯೇ ಪ್ರಧಾನಿಗೆ ಪತ್ರ ಬರೆದಿದ್ದೆ. ಶೀಘ್ರದಲ್ಲಿಯೇ ವಿಶೇಷ ಸ್ಥಾನಮಾನ ಸಿಗುವ ಭರವಸೆಯಿದೆ. ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ಹೇರಲು ವಿಧಾನಸಭೆಯಲ್ಲಿ ನಿರ್ಣಯ ಕೂಡಾ ಅಂಗೀಕರಿಸಲಾಗಿದೆ ಎಂದು ತಿಳಿಸಿದರು.

ಆಂಧ್ರಪ್ರದೇಶದ ವಿಶೇಷ ಸ್ಥಾನಮಾನ ವಿಷಯಕ್ಕೆ ಸಂಬಂಧಿಸಿದಂತೆ ಟಿಡಿಪಿ ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ನಂತರ ಇದೇ ರೀತಿಯ ಬೇಡಿಕೆ ಹೊಂದಿರುವ ಬಿಹಾರ ಈ ವಿಚಾರದಲ್ಲಿ ಮೌನವಾಗಿದೆ ಎಂದು ಆರ್ ಜಿಡಿ ವಾಗ್ದಾಳಿ ನಡೆಸಿತ್ತು.

ಆಗಾಗ್ಗೇ ಈ ಬೇಡಿಕೆಯನ್ನು ಪ್ರಸ್ತಾಪಿಸುತ್ತಾಲೇ ಬರಲಾಗಿದೆ. ಇದರಿಂದ ಒಂದು ಸೆಕೆಂಡ್ ಕೂಡಾ ತಪ್ಪಿಸಿಕೊಂಡಿಲ್ಲ.ಇದನ್ನು ಯಾರು  ಅರಿವಿಗೆ ತೆಗೆದುಕೊಂಡಿರಲಿಲ್ಲವೇ ಅವರೀಗ ನನ್ನ ಮೌನ ಬಗ್ಗೆ ಪ್ರಶ್ನಿಸುತ್ತಿರುವುದನ್ನು ನೋಡಿದ್ದರೆ ನಗು ಬರುತ್ತದೆ ಎಂದು ನಿತಿಶ್ ಕುಮಾರ್ ಹೇಳಿದರು

15 ನೇ ಹಣಕಾಸು ಆಯೋಗದ ಮುಂದೆಯೇ ಬಿಹಾರ ರಾಜ್ಯದ ವಿಶೇಷ ಸ್ಥಾನಮಾನಕ್ಕಾಗಿ ಬೇಡಿಕೆ ಇಟ್ಟಿರುವುದಾಗಿ ತಿಳಿಸಿದ ನಿತಿಶ್ ಕುಮಾರ್  ಬಿಹಾರಕ್ಕೆ ವಿಶೇಷ ಸ್ಥಾನಮಾನದ ಅಗತ್ಯವಿದೆ. ಬೇಡಿಕೆ ಈಡೇರಿಸಲು ಕಟ್ಟಿಬದ್ಧವಾಗಿವೆ. ಆದರೆ, ಮತಕೋಸ್ಕರ ವಿರೋಧಿಗಳು ಈ ವಿಚಾರದಲ್ಲಿ ಇಲ್ಲಸಲ್ಲದ ಟೀಕೆ ಮಾಡುತ್ತಿವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com