ಯುಪಿ ಬೋರ್ಡ್ ಪರೀಕ್ಷೆ: ಉತ್ತರ ಪತ್ರಿಕೆಯಲ್ಲಿ 50, 100ರ ನೋಟುಗಳು ಕಂಡು ದಂಗಾದ ಮೌಲ್ಯಮಾಪಕರು!

ಉತ್ತರಪ್ರದೇಶದ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯಲ್ಲಿ 50, 100 ರುಪಾಯಿ ನೋಟುಗಳನ್ನು ಇಟ್ಟಿದ್ದು ಇದನ್ನು ಕಂಡ ಮೌಲ್ಯಮಾಪಕರು ದಂಗಾಗಿದ್ದಾರೆ...
ಉತ್ತರಪತ್ರಿಕೆಯಲ್ಲಿ ಗರಿ ಗರಿ ನೋಟುಗಳು
ಉತ್ತರಪತ್ರಿಕೆಯಲ್ಲಿ ಗರಿ ಗರಿ ನೋಟುಗಳು
ಫಿರೋಜಬಾದ್(ಉತ್ತರಪ್ರದೇಶ): ಉತ್ತರಪ್ರದೇಶದ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯಲ್ಲಿ 50, 100 ರುಪಾಯಿ ನೋಟುಗಳನ್ನು ಇಟ್ಟಿದ್ದು ಇದನ್ನು ಕಂಡ ಮೌಲ್ಯಮಾಪಕರು ದಂಗಾಗಿದ್ದಾರೆ. 
ವಿದ್ಯಾರ್ಥಿಗಳು ಮೌಲ್ಯಮಾಪಕರಿಗೆ ಲಂಚ ನೀಡುವ ಮೂಲಕ ಪರೀಕ್ಷೆ ಪಾಸಾಗಲು ದಾರಿ ಹುಡುಕಿಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. 
ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿರುವುದರಿಂದ ನಕಲು ಮಾಡಲು ಭಯಗೊಂಡ ವಿದ್ಯಾರ್ಥಿಗಲು ಮೌಲ್ಯಮಾಪಕರಿಗೆ ಲಂಚದ ಆಮಿಷ ಹೊಡ್ಡಿದ್ದಾರೆ. 
ಇನ್ನು ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿ ಇರುವಾಗ ವಿದ್ಯಾರ್ಥಿಗಳು ಉತ್ತರಪತ್ರಿಕೆಗೆ ಹೇಗೆ ನೋಟು ಇಟ್ಟರು. ಇದು ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಗಮನಕ್ಕೆ ಬಂದಿಲ್ಲೇ ಎಂಬ ಬಗ್ಗೆಯೂ ತನಿಖೆ ನಡೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com