ಎಸ್ಸಿ/ ಎಸ್ಟಿ ಕಾಯ್ದೆಯಡಿ ಸರ್ಕಾರಿ ನೌಕರರ ತತ್‌ಕ್ಷಣದ ಬಂಧನ ಸಲ್ಲದು: ಸುಪ್ರೀಂ ಕೋರ್ಟ್

ಸರ್ಕಾರಿ ನೌಕರರ ವಿರುದ್ಧದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ (ಎಸ್‌ಸಿ, ಎಸ್‌ಟಿ) ದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ದುರುಪಯೋಗವಾಗುವುದುನ್ನು ತಡೆಯಲು ಸುಪ್ರೀಂ ಕೋರ್ಟ್.......
ಸರ್ವೋಚ್ಛ ನ್ಯಾಯಾಲಯ
ಸರ್ವೋಚ್ಛ ನ್ಯಾಯಾಲಯ
ನವದೆಹಲಿ: ಸರ್ಕಾರಿ ನೌಕರರ ವಿರುದ್ಧದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ (ಎಸ್‌ಸಿ, ಎಸ್‌ಟಿ) ದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ದುರುಪಯೋಗವಾಗುವುದುನ್ನು ತಡೆಯಲು ಸುಪ್ರೀಂ ಕೋರ್ಟ್ ಕಠಿಣ ನಿರ್ಧಾರಕ್ಕೆ ಮುಂದಾಗಿದೆ. ಈ ಕಾಯ್ದೆಯಡಿಯಲ್ಲಿ ಯಾರೇ ದೂರು ಸಲ್ಲಿಸಿದರೂ ಸರ್ಕಾರಿ ನೌಕರರನ್ನು ತಕ್ಷಣ ಬಂಧಿಸಬಾರದು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನಿಡಿದೆ.
ಡೆಪ್ಯುಟಿ ಪೋಲೀಸ್ ಸೂಪರಿಟೆಂಡೆಂಟ್ ಅವರ ಮಟ್ಟದ ಅಧಿಕಾರಿಗಳು ಇಂತಹಾ ದೂರುಗಳ ಸತ್ಯಾಸತ್ಯತೆಯನ್ನು ತನಿಖೆ ನಡೆಸಬೇಕು. ಆ ಬಳಿಕವೇ ಸರ್ಕಾರಿ ನೌಕರರನ್ನು ಬಂಧಿಸಬಹುದು  ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿ ಆದರ್ಶ್‌ ಗೋಯಲ್‌ ಮತ್ತು ಯು ಯು ಲಲಿತ್‌ ಅವರನ್ನೊಳಗೊಂಡ ನ್ಯಾಯಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದ್ದು  ಕಾಯ್ದೆಯಲ್ಲಿ ಬಂಧಿತರಾದ ಸರ್ಕಾರಿ ನೌಕರರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರೆ ಅವರಿಗೆ ಜಾಮೀನು ಮಂಜೂರು ಮಾಡುವುದಕ್ಕೆ ಯಾವ ನಿರ್ಬಂಧವಿರುವುದಿಲ್ಲ ಎಂದು ಹೇಳಿದೆ.
ಉಚಿತ ಸ್ಥಾನದಲ್ಲಿರುವ ಅಧಿಕಾರಿಯ ಪೂರ್ವಾನುಮತಿ  ಪಡೆದ ಬಳಿಕವೇ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಸರ್ಕಾರಿ ನೌಕರರನ್ನು ಬಂಧನ ಮಾಡಬಹುದು ಎಂದು ನ್ಯಾಯಪೀಠ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com