ತಮಿಳುನಾಡಿನ ಪುಡುಕೊಟ್ಟೈ ಜಿಲ್ಲೆಯಲ್ಲಿ ಪೆರಿಯಾರ್ ಪ್ರತಿಮೆ ವಿಧ್ವಂಸ

ತಮಿಳುನಾಡಿನ ಪುಡುಕೊಟ್ಟೈ ಜಿಲ್ಲೆಯ ಇಂದು ನಸುಕಿನಲ್ಲಿ ದುಷ್ಕರ್ಮಿಗಳು ದ್ರಾವಿಡ ನಾಯಕ ಪೆರಿಯಾರ್ ಅವರ ಪ್ರತಿಮೆಯನ್ನು ವಿಧ್ವಂಸಗೊಳಿಸಿದ್ದಾರೆ. ಪ್ರತಿಮೆಯ ತಲೆಭಾಗವನ್ನು ಕಡಿದು ಹೊತೊಯ್ಯಲಾಗಿದೆ.
ವಿದ್ವಂಸಗೊಳಿಸಿರುವ ಪೆರಿಯಾರ್ ಪ್ರತಿಮೆ
ವಿದ್ವಂಸಗೊಳಿಸಿರುವ ಪೆರಿಯಾರ್ ಪ್ರತಿಮೆ

ಪುಡುಕೊಟ್ಟೈ: ತಮಿಳುನಾಡಿನ ಪುಡುಕೊಟ್ಟೈ ಜಿಲ್ಲೆಯ ಇಂದು ನಸುಕಿನಲ್ಲಿ ದುಷ್ಕರ್ಮಿಗಳು ದ್ರಾವಿಡ ನಾಯಕ ಪೆರಿಯಾರ್ ಅವರ ಪ್ರತಿಮೆಯನ್ನು ವಿಧ್ವಂಸಗೊಳಿಸಿದ್ದಾರೆ.  ಪ್ರತಿಮೆಯ ತಲೆಭಾಗವನ್ನು ಕಡಿದು ಹೊತೊಯ್ಯಲಾಗಿದೆ.

 ಈ ಸುದ್ದಿ ತಿಳಿಯುತ್ತಿದ್ದಂತೆ  ಡಿಎಂಕೆ, ಎಂಡಿಎಂಕೆ, ಸಿಪಿಐ, ಸಿಪಿಎಂ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು ಹಾಗೂ ಪರಿಯಾರ್ ಅಭಿಮಾನಿಗಳು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಪ್ರಕ್ಷುಬ್ದ ವಾತವಾರಣ ನಿರ್ಮಾಣವಾಯಿತು.

ಡ್ರಾವಿಡ ಕಾಜಾಗಮ್  ವಲಯ ಅಧ್ಯಕ್ಷ ಪಿ. ರಾವಣನ್ ಅವರಿಂದ ಅಲಾಂಗುಡಿಯಿಂದ ಐದು ಕಿಲೋಮೀಟರ್ ದೂರದಲ್ಲಿ ಸ್ಥಾಪಿಸಲಾಗಿದ್ದ  ಈ ಪ್ರತಿಮೆ 8 ಅಡಿ ಎತ್ತರವಿದ್ದು, ಸಿಮೆಂಟ್ ನಿಂದ ನಿರ್ಮಾಣ ಮಾಡಲಾಗಿದೆ. 2013ರಲ್ಲಿ ಡಿಕೆ ಅಧ್ಯಕ್ಷ ಕೆ ವೀರಾಮಣಿ ಅವರಿಂದ ಪ್ರತಿಮೆ ಅನಾವರಣಗೊಳಿಸಲಾಗಿತ್ತು.

ಸುದ್ದಿ ತಿಳಿದು ಪೊಲೀಸ್ ಅಧಿಕಾರಗಳ ತಂಡ ಸ್ಥಳಕ್ಕೆ ಧಾವಿಸಿ ಯಾವುದೇ ಅಹಿತರ ಘಟನೆ ನಡೆಯದಂತೆ ಬಿಗಿ ಬಂಧೋಬಸ್ತ್ ಏರ್ಪಡಿಸಿದ್ದಾರೆ.  ಘಟನೆ ಖಂಡಿಸಿ ಪಕ್ಷದ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಲು ಡಿಕೆ ಕಾರ್ಯಕರ್ತರು ಚರ್ಚಿಸಿದ್ದಾರೆ.

ಗ್ರಾಮಸ್ಥರ ಒಪ್ಪಿಗೆಯಿಂದಲೇ ಪ್ರತಿಮೆ ಸ್ಥಾಪಿಸಲಾಗಿದೆ. ಆದರೆ, ಹೊರಗಿನವರಿಂದ ಪ್ರತಿಮೆಯನ್ನು  ಹಾನಿಗೊಳಿಸಲಾಗಿದೆ ಎಂದು ಡಿಕೆ ಕಾರ್ಯಕರ್ತರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿರುವ ಕೆಲ ಪೆರಿಯಾರ್ ಪ್ರತಿಮೆಗಳಿಗೆ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com