ನವದೆಹಲಿ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನಿಡಬೇಕೆನ್ನುವ ಬೇಡಿಕೆ ಇಟ್ಟು ತೆಲುಗುದೇಶಂ ಸಂಸದರು ಸದನದ ಬಾವಿಗಿಳಿದು ಗದ್ದಲ ಎಬ್ಬಿಸಿದ್ದಾರೆ. ಸಂಸತ್ ಕಲಾಪ ಪ್ರಾರಂಬವಾಗಿ 12 ದಿನಗಳಿಂಡಲೂ ಗಲಾಟೆ, ಪ್ರತಿಭಟನೆಗಳಿಂದ ಸಮಯ ವ್ಯರ್ಥವಾಗುತ್ತಿದ್ದು ಇಂದೂ ಸಹ ಇದೇ ರೀತಿಯ ಗದ್ದಲದ ಕಾರಣ ಉಭಯ ಸದನಗಳ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.