ನೋಟ್ ಬ್ಯಾನ್ ಗೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಸ್ಪಂದನೆ: ನಾರಾಯಣ ಮೂರ್ತಿ

ನೋಟ್ ಬ್ಯಾನ್ ನೀತಿಯನ್ನು ನಗರ ಪ್ರದೇಶದ ಬುದ್ದಿವಂತರು ಒಪ್ಪಿಕೊಳ್ಳದಿದ್ದರೂ ಬಹು ಸಂಖ್ಯೆಯ ಗ್ರಾಮೀಣ ಪ್ರದೇಶದ ಜನರು ಒಪ್ಪಿಕೊಂಡಿದ್ದಾರೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ನಾರಾಯಣಮೂರ್ತಿ
ನಾರಾಯಣಮೂರ್ತಿ

ಕೊಲ್ಕತ್ತಾ: ಕೇಂದ್ರಸರ್ಕಾರ 2016ರಲ್ಲಿ ಜಾರಿಗೊಳಿಸಿದ್ದ ನೋಟ್ ಬ್ಯಾನ್ ನೀತಿಯನ್ನು ನಗರ ಪ್ರದೇಶದ ಬುದ್ದಿವಂತರು ಒಪ್ಪಿಕೊಳ್ಳದಿದ್ದರೂ ಬಹು ಸಂಖ್ಯೆಯ ಗ್ರಾಮೀಣ ಪ್ರದೇಶದ ಜನರು ಒಪ್ಪಿಕೊಂಡಿದ್ದಾರೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಕೊಲ್ಕತ್ತಾದಲ್ಲಿನ ಫ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿಂದು ನೋಟ್ ಬ್ಯಾನ್ ಕುರಿತಂತೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ತಾನೂ ಅರ್ಥಶಾಸ್ತ್ರಜ್ಞನಲ್ಲ. ಆದರೆ, ನಾನೂ ಗಮನಿಸಿದ್ದೇನೆ, ನಗರ ಪ್ರದೇಶದ ಜನರು ನೋಟ್ ಬ್ಯಾನ್  ನೀತಿಯನ್ನ ಒಪ್ಪಿಕೊಳ್ಳಲಿಲ್ಲ. ಆದರೆ. ಗ್ರಾಮೀಣಪ್ರದೇಶದ ಬಹುತೇಕ ಮಂದಿ ಸ್ವಾಗತಿಸಿದ್ದಾರೆ ಎಂದರು.

500 ರೂ ರದ್ದುಗೊಳಿಸಿದ ನಂತರ ಸರ್ಕಾರ  ಹೊಸ ನೋಟುಗಳನ್ನು ಚಲಾವಣೆಗೆ ತಂದಿದ್ದೇ, ಬಹು ಮೊತ್ತದ 2000 ರೂ ರದ್ದಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ನನ್ನಗೆ ಅರ್ಥವಾಗಲಿಲ್ಲ. ಏಕೆ ಇದು ಸಂಭವಿಸಿತು ಎಂದು ತಜ್ಞರು  ಕೇಳುತ್ತಿದ್ದಾರೆ. ನೀವೂ ಅವರೊಂದಿಗೆ ಮಾತನಾಡಿ ಎಂದು ತಿಳಿಸಿದರು.

1950 ರಿಂದಲೂ ಜಪಾನ್, ಚೀನಾ ಮತ್ತಿತರ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿನ ತಂತ್ರಜ್ಞಾನ ಮಟ್ಟ ಕಡಿಮೆ ಇದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಾರಾಯಣಮೂರ್ತಿ, . ದೇಶದಲ್ಲಿನ ಶೇ.75 ರಷ್ಟು ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿದ್ದಾರೆ. ಆದರೆ, ಆ ಪೈಕಿ 8 ನೇ ತರಗತಿವರೆಗೆ ಮಾತ್ರ ವ್ಯಾಸಂಗ ಮಾಡಿ ನಂತರ ಶಾಲೆ ಬಿಡುತ್ತಿದ್ದಾರೆ.ಇದು ದುರದೃಷ್ಟಕರ ಸಂಗತಿ ಎಂದರು.

ಅಂತಹ ವಿದ್ಯಾರ್ಥಿಗಳಿಗೆ  22 ವಯಸ್ಸು ಮುಗಿಸಿದ ನಂತರ  ಉದ್ಯೋಗ ಅಗತ್ಯವಾಗುತ್ತದೆ. ಆದರೆ, ಅವರ ಸಾಮರ್ಥ್ಯಕನ್ನುಗುಣವಾಗಿ ಉದ್ಯೋಗ ದೊರೆಯುತ್ತದೆ. ಇದು ಕಡಿಮೆ ಉತ್ಪಾದನಾ ಮಟ್ಟಕ್ಕೆ ಕಾರಣವಾಗಿದೆ ಎಂದರು.

ಉತ್ಪಾದನೆ ಹಾಗೂ ಸೇವೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಳ್ಳಬೇಕಾಗಿದೆ ಎಂದು ಅವರು  ತಿಳಿಸಿದರು


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com