• Tag results for ಕೋಲ್ಕತ್ತಾ

ನೀಟ್ ಪರೀಕ್ಷಾ ಅಭ್ಯರ್ಥಿಗಳಿಗೆ ಕೋಲ್ಕತ್ತಾ ಮೆಟ್ರೊದಿಂದ ಇಂದು ವಿಶೇಷ ರೈಲು ಸಂಚಾರ;ನಿಯಮಿತ ರೈಲು ಸಂಚಾರ ನಾಳೆ ಆರಂಭ

ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕೋಲ್ಕತ್ತಾ ಮೆಟ್ರೊ ರೈಲು ಭಾನುವಾರ ನೀಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗಾಗಿ ವಿಶೇಷ ಸಂಚಾರ ನಡೆಸಿತು. ಕೋಲ್ಕತ್ತಾದಲ್ಲಿ ನಾಳೆ ಮೆಟ್ರೊ ಸಂಚಾರ ಆರಂಭವಾಗಲಿದೆ.

published on : 13th September 2020

ಕೋಲ್ಕತ್ತಾದಲ್ಲಿ ಅಮಾನವೀಯ ಕೃತ್ಯ! ಯುವತಿಗೆ ಕಿರುಕುಳ ನೀಡಿ ವೇಗವಾಗಿ ಚಲಿಸುತ್ತಿದ್ದ ಕಾರಿಂದ ಹೊರತಳ್ಳಿದ ಸ್ನೇಹಿತ

31 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ವೇಗವಾಗಿ ಚಲಿಸುವ ಕಾರಿನಿಂದ ತಳ್ಳಿರುವ ಅಮಾನವೀಯ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಇಷ್ಟು ಮಾತ್ರವಲ್ಲದೆ ಯುವತಿಯನ್ನು ಕಾರಿನಿಂದ ತಳ್ಳಲಾಗಿದ್ದ ಕಾರು ಇನ್ನೊಬ್ಬ ದಂಪತಿಗಳ ಮೇಲೆ ಹರಿದು ಹೋಗಿದ್ದು ಪತಿಯ ಕಿರುಚಾಟ ಕೇಳಿ  ವಾಹನವನ್ನು ನಿಲ್ಲಿಸಲು ಪ್ರಯತ್ನಿಸಲಾಗಿದೆ ಎಂದು ಪೋಲೀಸರು ಹೇಳಿದ್ದಾರೆ.

published on : 7th September 2020

ಕೋಲ್ಕತ್ತಾ: ಒಂದು ವಾರಗಳ ಕಾಲ ವೆಂಟಿಲೇಟರ್ ನಲ್ಲಿದ್ದ ನವಜಾತ ಶಿಶು ಕೋವಿಡ್-19 ನಿಂದ ಪಾರು

ಕೋವಿಡ್-19 ನಿಂದಾಗಿ ಸತತ ಒಂದು ವಾರಗಳ ಕಾಲ ವೆಂಟಿಲೇಟರ್ ನಲ್ಲಿದ್ದ ನವಜಾತ ಶಿಶು ಕೋವಿಡ್-19 ನಿಂದ ಪಾರಾಗಿದೆ. 

published on : 5th September 2020

ಪಶ್ಚಿಮ ಬಂಗಾಳದಲ್ಲಿ ಶಾಲಾ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ: ತೀವ್ರ ಪ್ರತಿಭಟನೆ, ಪೊಲೀಸ್ ವಾಹನಕ್ಕೆ ಬೆಂಕಿ

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಿಂದ ಸಿಲಿಗುರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 31 ನಿನ್ನೆ ಭಾನುವಾರ ಅಕ್ಷರಶಃ ಯುದ್ಧಭೂಮಿಯಂತೆ ಮಾರ್ಪಟ್ಟಿತ್ತು.

published on : 20th July 2020

ಕೋಲ್ಕತ್ತಾಗೆ 6 ನಗರಗಳಿಂದ ಜುಲೈ 6-19 ವರೆಗೆ ವಿಮಾನ ಸಂಚಾರ ರದ್ದು

ಕೊರೋನಾ ವೈರಸ್ ದೇಶಾದ್ಯಂತ ವಿವಿಧ ನಗರಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೋಲ್ಕತ್ತಾಗೆ 6 ನಗರಗಳಿಂದ ಜು.6-19 ವರೆಗೆ ಪ್ರಯಾಣಿಕ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

published on : 4th July 2020

''ನನ್ನ ತಲೆ ಕತ್ತರಿಸಿ'' ಕೋಲ್ಕತ್ತಾದಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡಿದವರ ವಿರುದ್ಧ ಮಮತಾ ಬ್ಯಾನರ್ಜಿ ಅಸಹನೆ

ಆಂಫಾನ್ ಚಂಡಮಾರುತ ಅಪ್ಪಳಿಸಿ ಬೃಹತ್ ಪ್ರಮಾಣದಲ್ಲಿ ನಷ್ಟವುಂಟಾದ ನಂತರ ವಿದ್ಯುತ್ ಸೇರಿದಂತೆ ಇತರ ಅಗತ್ಯ ಸೇವೆಗಳ ಪುನರ್ ಸ್ಥಾಪನೆಗೆ ಇನ್ನು ಸ್ವಲ್ಪ ದಿನಗಳ ಕಾಲಾವಕಾಶ ಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಳಿದ್ದಾರೆ.

published on : 24th May 2020

'ಕೊರೋನಾ' ಎಂದು ಕರೆಯುತ್ತಿದ್ದರು, ಮುಖ ಮುಚ್ಚಿಕೊಳ್ಳುತ್ತಿದ್ದರು: ಕೋಲ್ಕತ್ತಾದಲ್ಲಿ ಅನುಭವಿಸಿದ ನೋವು ಹಂಚಿಕೊಂಡ ನರ್ಸ್!

ಕೋಲ್ಕತ್ತಾದಲ್ಲಿ ಬಾಡಿಗೆ ವಾಸಸ್ಥಳದಿಂದ ಹೊರಬಂದ ಸೊಮಿಚೊನ್ ಮತ್ತು ಅವರ ಸಹೋದ್ಯೋಗಿ ದಾದಿಯರು ವಿಚಿತ್ರ ಸನ್ನಿವೇಶವನ್ನು ಎದುರಿಸಬೇಕಾಗಿ ಬಂತು. ಅಕ್ಕಪಕ್ಕದವರು ಅವರನ್ನು ಭೀತಿಯ ಭಾವನೆಯಿಂದ ನೋಡಿ ಕೊರೋನಾ ಕೊರೋನಾ ಎಂದು ಕರೆಯುತ್ತಾ ತಮ್ಮ ಮುಖ ಮುಚ್ಚಿಕೊಳ್ಳುತ್ತಿದ್ದರಂತೆ.

published on : 22nd May 2020

ಪಶ್ಚಿಮ ಬಂಗಾಳದಲ್ಲಿ 13 ಜನಕ್ಕೆ ಹಂದಿ ಜ್ವರ!

ದೇಶಾದ್ಯಂತ ಕೊರೋನಾ ವೈರಸ್ ಹರಡುವ ಭೀತಿ ಎದುರಾಗಿದ್ದರೆ, ಇತ್ತ ಪಶ್ಚಿಮ ಬಂಗಾಳದಲ್ಲಿ 13 ಜನಕ್ಕೆ ಹಂದಿ ಜ್ವರ ಕಾಣಿಸಿಕೊಂಡಿದೆ. 

published on : 14th March 2020

'ದೇಶದಲ್ಲಿ ಶಾಂತಿಗೆ ಭಂಗ ತರುವವರಲ್ಲಿ ಭಯ ಹುಟ್ಟಿಸುವುದು ಎನ್ಎಸ್ ಜಿ ಕೆಲಸ': ಅಮಿತ್ ಶಾ 

ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಕೋಟ್ ವಾಯುದಾಳಿ ನಂತರ ಭಾರತದ ರಕ್ಷಣಾ ಪಡೆ ಅಮೆರಿಕ ಮತ್ತು ಇಸ್ರೇಲ್ ದೇಶಗಳಿಗೆ ಸಮನಾಗಿದ್ದು, ಸೈನಿಕರ ಬಲಿದಾನಕ್ಕೆ ಪ್ರತಿಯಾಗಿ ಶತ್ರುವಿನ ದೇಶದೊಳಗೆ ಹೋಗಿ ಯುದ್ಧ ಮಾಡುವ ಸಾಮರ್ಥ್ಯವಿದೆ ಎಂದು ನಮ್ಮ ದೇಶ ತೋರಿಸಿಕೊಟ್ಟಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

published on : 1st March 2020

ಕೊಲ್ಕತ್ತಾ ಪೋರ್ಟ್ ಗೆ ಶ್ಯಾಮ್ ಪ್ರಸಾದ್ ಮುಖರ್ಜಿ ಹೆಸರು ಮರು ನಾಮಕರಣ, ಪ್ರಧಾನಿ ಮೋದಿ ಘೋಷಣೆ!

ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೊಲ್ಕತ್ತಾ ಪೋರ್ಟ್ ಟ್ರಸ್ಟ್ ಅನ್ನು ಭಾರತೀಯ ಜನಾ ಸಂಘದ  ಸಂಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಪೋರ್ಟ್ ಎಂದು ಮರುನಾಮಕರಣ ಮಾಡಿದ್ದಾರೆ.

published on : 12th January 2020

ಕೋಲ್ಕತ್ತಾದಲ್ಲಿ ಎರಡನೇ ದಿನ ಪ್ರಧಾನಿ ಮೋದಿ: ಬೇಲೂರು ಮಠದಲ್ಲಿ ಸ್ವಾಮಿ ವಿವೇಕಾನಂದ ಸ್ಮರಿಸಿದ ಪ್ರಧಾನಿ ಮೋದಿ 

ತಮ್ಮ ಎರಡನೇ ದಿನದ ಕೋಲ್ಕತ್ತಾ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಳಗ್ಗೆ ಬೇಲೂರು ಮಠಕ್ಕೆ ಭೇಟಿ ನೀಡಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಗೌರವ ನಮನ ಸಲ್ಲಿಸಿದರು.

published on : 12th January 2020

ಸಿಎಎ ನಿಮ್ಮ ಪೌರತ್ವ ಕಸಿದುಕೊಳ್ಳುವುದಿಲ್ಲ, ಬದಲಿಗೆ ಪೌರತ್ವ ಕೊಡುತ್ತದೆ ಎಂದು ಸಾರಿ ಹೇಳುತ್ತೇನೆ: ಪ್ರಧಾನಿ ಮೋದಿ 

ಪೌರತ್ವ ತಿದ್ದುಪಡಿ ಕಾಯ್ದೆ ನಿಮ್ಮ ಪೌರತ್ವವನ್ನು ಕಿತ್ತುಕೊಳ್ಳುವುದಲ್ಲ, ಬದಲಾಗಿ ಪೌರತ್ವ ನೀಡುವುದು ಎಂದು ಮತ್ತೊಮ್ಮೆ ಸಾರಿ ಹೇಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಛರಿಸಿದ್ದಾರೆ.

published on : 12th January 2020

ಭಾರತದ ಸಂಸ್ಕೃತಿ, ಪರಂಪರೆ ರಕ್ಷಣೆಗೆ ರಾಷ್ಟ್ರೀಯ ಮಿಷನ್ ಆರಂಭ:ಪ್ರಧಾನಿ ನರೇಂದ್ರ ಮೋದಿ 

ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ತಮ್ಮ ಸರ್ಕಾರ ರಾಷ್ಟ್ರೀಯ ಮಿಷನ್ ನ್ನು ಆರಂಭಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

published on : 12th January 2020

ಕೋಲ್ಕತ್ತಾ ರ್ಯಾಲಿ ಹಿನ್ನೆಲೆ ಪ್ರತಿ ಪ್ರಮೆಗಳಿಗೂ ಕಾವಲುಗಾರನನ್ನು ನೇಮಿಸಲಿರುವ ಬಿಜೆಪಿ! 

ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ವಿರೂಪಗೊಳಿಸಿದ ಘಟನೆ ನಡೆದ ನಂತರ ಬಿಜೆಪಿ ಕೋಲ್ಕತ್ತಾದಲ್ಲಿ ನಡೆಯಲಿರುವ ರ್ಯಾಲಿ ಹಿನ್ನೆಲೆಯಲ್ಲಿ ಪ್ರತಿ ಪ್ರತಿಮೆಗಳಿಗೂ ಓರ್ವ ಕಾವಲುಗಾರನನ್ನು ನಿಯೋಜನೆ ಮಾಡಿದೆ. 

published on : 23rd December 2019

ವಿದ್ವಂಸಕ ಕೃತ್ಯ ನಡೆಸಿದ್ದ ಬಾಂಗ್ಲಾ ಭಯೋತ್ಪಾದಕ ಸಂಘಟನೆ ಜೆಎಂಬಿ ಮುಖ್ಯಸ್ಥ ಇಜಾಜ್‌ ಬಂಧನ

ಖಾಗ್ರಘಡ್‌ ಸ್ಫೋಟ ಮತ್ತು ಬೋಧ್ ಗಯಾ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆ ಜೆಎಂಬಿ ಭಾರತೀಯ ವಿಭಾಗದ ಮುಖ್ಯಸ್ಥ ಎಂ.ಡಿ.ಇಜಾಜ್‌ನನ್ನು ಕೋಲ್ಕತಾ ಮತ್ತು ಬಿಹಾರ ಪೊಲೀಸ್‌ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಗಯಾದಲ್ಲಿ ಬಂಧಿಸಿದೆ.

published on : 26th August 2019
1 2 3 >