ಮ್ಯಾನ್ಮಾರ್‌ನಲ್ಲಿ 6.1 ತೀವ್ರತೆಯ ಭೂಕಂಪನ: ಕಂಪನಕ್ಕೆ ಹೆದರಿ ಮನೆಗಳಿಂದ ಹೊರಬಂದ ಕೋಲ್ಕತ್ತಾ ಜನತೆ!

ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 6.1 ತೀವ್ರತೆಯ ಭೂಕಂಪವು ಕೋಲ್ಕತ್ತಾದಲ್ಲಿ ಕಂಪನವನ್ನುಂಟು ಮಾಡಿದ್ದು ಜನರು ತಮ್ಮ ಮನೆಗಳಿಂದ ಹೊರಗೆ ಓಡಿಬಂದರು.
representation purposes only
ಸಂಗ್ರಹ ಚಿತ್ರ
Updated on

ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 6.1 ತೀವ್ರತೆಯ ಭೂಕಂಪವು ಕೋಲ್ಕತ್ತಾದಲ್ಲಿ ಕಂಪನವನ್ನುಂಟು ಮಾಡಿದ್ದು ಜನರು ತಮ್ಮ ಮನೆಗಳಿಂದ ಹೊರಗೆ ಓಡಿಬಂದರು. ಕೋಲ್ಕತ್ತಾ ಮತ್ತು ನೆರೆಯ ಬಾಂಗ್ಲಾದೇಶ ಸೇರಿದಂತೆ ಪಶ್ಚಿಮ ಬಂಗಾಳದ ಹಲವಾರು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಮ್ಯಾನ್ಮಾರ್‌ನ ಅಕ್ಯಾಬ್‌ನಿಂದ ಪೂರ್ವಕ್ಕೆ 70 ಮೈಲುಗಳಷ್ಟು ದೂರದಲ್ಲಿ ಭೂಕಂಪ ಸಂಭವಿಸಿದೆ. ಕೋಲ್ಕತ್ತಾದಲ್ಲಿ ಮಂಗಳವಾರ ಸಂಜೆ ಕಂಪನದ ಅನುಭವವಾಗಿದೆ. ಕೋಲ್ಕತ್ತಾ ಅಥವಾ ಯಾವುದೇ ಬಂಗಾಳ ಸರ್ಕಾರಿ ಪ್ರಾಧಿಕಾರವು ಯಾವುದೇ ಸಾವುನೋವುಗಳನ್ನು ದೃಢಪಡಿಸಿಲ್ಲ.

ಬಾಂಗ್ಲಾದೇಶದಲ್ಲಿ ಭೂಕಂಪನವಾದ ಕೆಲವೇ ಗಂಟೆಗಳಲ್ಲಿ ಮ್ಯಾನ್ಮಾರ್‌ನಲ್ಲಿ ಭೂಕಂಪ ಸಂಭವಿಸಿದೆ. ವರದಿಗಳ ಪ್ರಕಾರ, 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ. ಮೊದಲು 4.1 ತೀವ್ರತೆಯ ಭೂಕಂಪನ ದಾಖಲಾಗಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಹೇಳಿಕೆಯಲ್ಲಿ ತಿಳಿಸಿದೆ. ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದ ಕೇಂದ್ರಬಿಂದು ಯೆನಾಂಗ್‌ಯಾಂಗ್‌ನಿಂದ 95 ಕಿಲೋಮೀಟರ್ ದೂರದಲ್ಲಿದೆ.

ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಅನುಭವ ಕೋಲ್ಕತ್ತಾದಲ್ಲಿಯೂ ಸಂಭವಿಸಿದೆ. ಕೋಲ್ಕತ್ತಾ ನಿವಾಸಿಗಳು ತಮ್ಮ ಮನೆಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಕಂಪನದ ಅನುಭವವಾಗಿದೆ ಎಂದು ವರದಿ ಮಾಡಿದ್ದಾರೆ. ಅಧಿಕಾರಿಗಳು ತಕ್ಷಣ ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ವರದಿ ಮಾಡಿಲ್ಲ. ಜನರು ಭೂಕಂಪದ ಅನುಭವವನ್ನು ತಮ್ಮ ಮನೆಯಲ್ಲಿ, ಕಚೇರಿಯಲ್ಲಿ ಮತ್ತು ರೆಸ್ಟೋರೆಂಟ್‌ಗಳಲ್ಲಿಯೂ ಅನುಭವಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿ ಮಾಡಿದ್ದಾರೆ.

representation purposes only
ರಾಷ್ಟ್ರೀಯ ಭದ್ರತೆ ಕುರಿತು Rahul Gandhi ಮಾತು; ನಕ್ಕ ಕಾಂಗ್ರೆಸ್ ಸಂಸದ, Video!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com