ಡೊಕ್ಲಾಂ ನಲ್ಲಿ ಮತ್ತೆ ಚೀನಾದ ಡ್ರಾಗನ್ ಸೇನೆ, ಟ್ವಿಟರ್ ನಲ್ಲಿ ಮೋದಿ ವಿರುದ್ಧ ರಾಹುಲ್ ವ್ಯಂಗ್ಯ

ದಕ್ಷಿಣ ಡೊಕ್ಲಾಂ ಗಡಿಯಲ್ಲಿ ಚೀನಾ ಸೇನೆ ಮತ್ತೆ ಹೊಸ ರಸ್ತೆ ನಿರ್ಮಾಣ ಮಾಡುತ್ತಿರುವ ವರದಿ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಅಧ್ಯಕ್ಷ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ದಕ್ಷಿಣ ಡೊಕ್ಲಾಂ ಗಡಿಯಲ್ಲಿ ಚೀನಾ ಸೇನೆ ಮತ್ತೆ ಹೊಸ ರಸ್ತೆ ನಿರ್ಮಾಣ ಮಾಡುತ್ತಿರುವ ವರದಿ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರಶ್ನೆಯೊಂದನ್ನು ಹಾಕಿರುವ ರಾಹುಲ್ ಗಾಂಧಿ ಟ್ವಿಟರ್ ಬಳಕೆದಾರರಿಗೆ ಉತ್ತರ ನೀಡಲು ನಾಲ್ಕು ಅವಕಾಶಗಳನ್ನೂ ಕೂಡ ನೀಡಿದ್ದಾರೆ. "ಡೊಕ್ಲಾಂ ನಲ್ಲಿ ಮತ್ತೆ ಚೀನಾ ಸೇನೆಯ ಚಟುವಟಿಕೆ ಮುಂದುವರೆದಿದ್ದು, ಇದಕ್ಕೆ ಪ್ರಧಾನಿ ಮೋದಿ ಹೇಗೆ ಪ್ರತಿಕ್ರಿಯಸಬೇಕು? 1.ಅಪ್ಪುಗೆ ತಂತ್ರದ ಮೂಲಕ 2.ರಕ್ಷಣಾ ಸಚಿವರನ್ನು ತೆಗಳುವ ಮೂಲಕ 3.ಸಾರ್ವಜನಿಕವಾಗಿ ಅಳುವ ಮೂಲಕ 4.ಮೇಲಿನ ಎಲ್ಲವೂ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೆ ತಮ್ಮ ಟ್ವೀಟ್ ಗೆ ಚೀನಾ ಸೇನೆ ಡೊಕ್ಲಾಂ ನಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವ ಸುದ್ದಿ ಪ್ರಕಟಿಸಿರುವ ವರದಿಯನ್ನು ಟ್ಯಾಗ್ ಮಾಡಿದ್ದಾರೆ.
ಕಳೆದ 7ತಿಂಗಳ ಹಿಂದೆ ಭಾರತ ಮತ್ತು ಚೀನಾ ಸಂಘರ್ಷಕ್ಕೆ ಕಾರಣವಾಗಿದ್ದ ಡೊಕ್ಲಾಂ ವಿವಾದ ಇದೀಗ ಮತ್ತೆ ಭುಗಿಲೆದ್ದಿದೆ ಎಂದು ವರದಿಯೊಂದು ಪ್ರಸಾರವಾಗಿದ್ದು, ವರದಿಯಲ್ಲಿ ಚೀನಾ ಸೇನೆ ತುಂಬಾ ಚಾಣಾಕ್ಷವಾಗಿ ದಕ್ಷಿಣ ಡೊಕ್ಲಾಂ ನಲ್ಲಿ ರಹಸ್ಯ ರಸ್ತೆ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com