ಮೇ 10ರೊಳಗೆ 200 ಕೋಟಿ ರು. ಠೇವಣಿ ಇಡುವಂತೆ ಜೆಎಎಲ್ ಗೆ ಸುಪ್ರೀಂ ಆದೇಶ

ಜಯಪ್ರಕಾಶ್ ಅಸೋಸಿಯೇಟ್ಸ್ ಲಿಮಿಟೆಡ್(ಜೆಎಎಲ್)ಗೆ ಸುಪ್ರೀಂಕೋರ್ಟ್ ಮೇ 10ರೊಳಗೆ 200 ಕೋಟಿ ರುಪಾಯಿ ಠೇವಣಿ ಇಡುವಂತೆ ಆದೇಶಿಸಿದೆ...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
ನವದೆಹಲಿ: ಜಯಪ್ರಕಾಶ್ ಅಸೋಸಿಯೇಟ್ಸ್ ಲಿಮಿಟೆಡ್(ಜೆಎಎಲ್)ಗೆ ಸುಪ್ರೀಂಕೋರ್ಟ್ ಮೇ 10ರೊಳಗೆ 200 ಕೋಟಿ ರುಪಾಯಿ ಠೇವಣಿ ಇಡುವಂತೆ ಆದೇಶಿಸಿದೆ. 
ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಅವರು ಪ್ರಮುಖ ರಿಯಲ್ ಎಸ್ಟೇಟ್ ಜೆಎಎಲ್ ಗೆ ಏಪ್ರಿಲ್ 6ರೊಳಗೆ 100 ಕೋಟಿ ಹಾಗೂ ಮೇ 10ರೊಳಗೆ 100 ಕೋಟಿ ರುಪಾಯಿಯನ್ನು ಠೇವಣಿ ಇಡುವಂತೆ ಆದೇಶಿಸಿದ್ದಾರೆ. 
ಇದೇ ವೇಳೆ ಮರುಪಾವತಿಯನ್ನು ಆಯ್ಕೆ ಮಾಡಿಕೊಂಡಿರುವ ಮನೆ ಮಾಲೀಕರಿಗೆ ಇಎಂಐ ಪಾವತಿಸುವಂತೆ ನೋಟಿಸ್ ಗಳನ್ನು ಕಳುಹಿಸಬಾರದು ಎಂದು ಜೆಎಎಲ್ ಗೆ ದೀಪಕ್ ಮಿಶ್ರಾ ಪೀಠದ ನ್ಯಾಯಾಧೀಶರಾದ ಎಎಂ ಖಾನ್ವಾಲಿಕರ್ ಮತ್ತು ಡಿವೈ ಚಂದ್ರಚೂಡ್ ಅವರು ಸೂಚಿಸಿದ್ದಾರೆ. 
ಜೆಎಎಲ್ 31 ಸಾವಿರ ಮನೆಗಳ ಪೈಕಿ ಶೇಖಕ 8ರಷ್ಟು ಮಂದಿ ಮಾತ್ರ ಮರುಪಾವತಿಯನ್ನು ಬಯಸಿದ್ದು ಇನ್ನುಳಿದ ಖರೀದಿದಾದರು ಫ್ಲಾಟ್ ಗಳಲ್ಲಿ ನೆಲೆಸಲು ಮುಂದಾಗಿದ್ದಾರೆ ಎಂದು ತಿಳಿಸಿದೆ. 
ಕಳೆದ ಜನವರಿಯಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಜೆಎಎಲ್ ಸಂಸ್ಧೆ 125 ಕೋಟಿ ರುಪಾಯಿಯನ್ನು ಸುಪ್ರೀಂನಲ್ಲಿ ಠೇವಣಿ ಇಟ್ಟಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com