ಫೇಸ್ ಬುಕ್ ವರದಿ ಸೋರಿಕೆ: 39 ಭಾರತೀಯ ಹತ್ಯೆ ವಿಷಯ ದಿಕ್ಕು ತಪ್ಪಿಸಲು ಬಿಜೆಪಿ ಯತ್ನ- ರಾಹುಲ್ ಗಾಂಧಿ

ಇರಾಕ್ ನಲ್ಲಿ 39 ಭಾರತೀಯರ ಹತ್ಯೆಗೀಡಾದ ಪ್ರಕರಣದ ದಿಕ್ಕು ತಪ್ಪಿಸಲು ಬಿಜೆಪಿ ಯತ್ನ ನಡೆಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ...
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ: ಇರಾಕ್ ನಲ್ಲಿ 39 ಭಾರತೀಯರ ಹತ್ಯೆಗೀಡಾದ ಪ್ರಕರಣದ ದಿಕ್ಕು ತಪ್ಪಿಸಲು ಬಿಜೆಪಿ ಯತ್ನ ನಡೆಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ. 
ಫೇಸ್ಬುಕ್ ವರದಿ ಸೋರಿಕೆ ಪ್ರಕರಣ ಸಂಬಂಧ ಕೇಂಬ್ರಿಜ್ ಅನಾಲಿಟಿಕಾ ಜೊತೆಗೆ ಕಾಂಗ್ರೆಲ್ ನಂಟು ಹೊಂದಿದೆ ಎಂಬ ಆರೋಪ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆನೀಡಿರುವ ಅವರು, ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿರುವ ಬಿಜೆಪಿ, ಇರಾಕ್ ನಲ್ಲಿ ಭಾರತೀಯರ ಹತ್ಯೆ ಪ್ರಕರಣ ಸಂಬಂಧ ಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂಬ್ರಿಜ್ ಅನಾಲಿಟಿಕಾ ಜೊತೆಗೆ ಕೈಜೋಡಿಸಿ ಕಾಂಗ್ರೆಸ್ ವರದಿಗಳನ್ನು ಕಳ್ಳತನ ಮಾಡುತ್ತಿದೆ ಎಂದು ಆರೋಪಿಸಿದೆ ಎಂದು ದೂರಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಗೆಲವು ಸಾಧಿಸುವ ಸಲುವಾಗಿ, ಕೋಟ್ಯಾಂತರ ಹಣವನ್ನು ಖರ್ಚು ಮಾಡುತ್ತಿರುವ ಕಾಂಗ್ರೆಸ್, ಕೇಂಬ್ರಿಜ್ ಅನಾಲಿಟಿಕಾ ಜೊತೆಗೆ ಕೈಜೋಡಿಸಿ, ಫೇಸ್ಬುಕ್ ಡೇಟಾ ಕಳ್ಳತನ ಮಾಡುತ್ತಿರುವುದಲ್ಲದೆ, ರಾಗುಲ್ ಅವರನ್ನು ಪ್ರಧಾನಿಯಾಗಿ ಬಿಂಬಿಸಲು ಎಲ್ಲಾ ರೀತಿಯ ಯತ್ನಗಳನ್ನು ನಡೆಸುತ್ತಿದೆ ಎಂದು ಬಿಜೆಪಿ ಆರೋಪ ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com