ರೋಹಿಣಿ ಸಿಂಧೂರಿ
ದೇಶ
ರೋಹಿಣಿ ಸಿಂಧೂರಿ ಅರ್ಜಿ ವಜಾಗೊಳಿಸಿದ ಸಿಎಟಿ: ಶೀಘ್ರವೇ ವರ್ಗಾವಣೆ ಸಾಧ್ಯತೆ
ಮಾ.07 ರಂದು ಸರ್ಕಾರ ತಮ್ಮನ್ನು ವರ್ಗಾವಣೆಗೊಳಿಸಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ್ದ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂನಿ ಅವರ ಅರ್ಜಿಯನ್ನು ಸಿಎಟಿ ವಜಾಗೊಳಿಸಿದೆ.
ಬೆಂಗಳೂರು: ಮಾ.07 ರಂದು ಸರ್ಕಾರ ತಮ್ಮನ್ನು ವರ್ಗಾವಣೆಗೊಳಿಸಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ್ದ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂನಿ ಅವರ ಅರ್ಜಿಯನ್ನು ಸಿಎಟಿ ವಜಾಗೊಳಿಸಿದೆ.
ವರ್ಗಾವಣೆಯನ್ನು ಪ್ರಶ್ನಿಸಿ ಸೂಕ್ತ ಕಾರಣಗಳೊಂದಿಗೆ ಮುಖ್ಯಕಾರ್ಯದರ್ಶಿಗಳಿಗೆ ಪತ್ರದ ಮೂಲಕ ತಿಳಿಸಿ ಎಂದು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ರೋಹಿಣಿ ಸಿಂಧೂರಿ ಅವರಿಗೆ ಸೂಚನೆ ನೀಡಿದ್ದು, ಇದಕ್ಕಾಗಿ ಮಾ.26 ವರೆಗೂ ಗಡುವು ನೀಡಿದೆ. ಅಲ್ಲಿಯವರೆಗೂ ಸಹ ರೋಹಿಣಿ ಸಿಂಧೂನಿ ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರೆಯಲಿದ್ದಾರೆ.
ಮಾ.26 ರ ನಂತರ ರೋಹಿಣಿ ಸಿಂಧೂರಿ ವರ್ಗಾವಣೆಯಾಗುವ ಸಾಧ್ಯತೆ ಇದ್ದು, ಈ ಆದೇಶದಿಂದ ಎರಡು ತಿಂಗಳಿಂದ ನಡೆಯುತ್ತಿದ್ದ ಜಿಲ್ಲಾಧಿಕಾರಿ ಹಾಗೂ ಸರ್ಕಾರದ ನಡುವಿನ ವಿವಾದವನ್ನು ಬಗೆಹರಿಯುವ ಸಾಧ್ಯತೆ ಇದೆ. ಈ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿ ರತ್ನಪ್ರಭ ಪ್ರತಿಕ್ರಿಯೆ ನೀಡಿದ್ದು ಸಿಎಟಿ ಆದೇಶ ತನ್ನೂ ತಮಗೆ ತಲುಪಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ