ನವದೆಹಲಿ: ಪತ್ರಕರ್ತ ರಾಜ್ದೇವ್ ರಂಜನ್ ಹತ್ಯೆ ಪ್ರಕರಣದಲ್ಲಿ ಆರ್ ಜೆ ಡಿ ಮುಖ್ಯಸ್ಥ, ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ ಪ್ರತಾಪ್ ಯಾದವ್ ಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದೆ.
ತನ್ನ ಪತಿ ರಾಜ್ದೇವ್ ರಂಜನ್ ಹತ್ಯೆ ಪ್ರಕರಣದಲ್ಲಿ ತೇಜ್ ಪ್ರತಾಪ್ ಅವರ ಕೈವಾಡವಿದೆ, ಹೀಗಾಗಿ ಇದರ ಸಂಬಂಧ ಸಿಬಿಐ ತನಿಖೆ ನಡೆಸಬೇಕು ಎಂದು ಮೃತ ರಾಜ್ದೇವ್ ಪತ್ನಿ ಆಶಾ ರಂಜನ್ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಅರ್ಜಿಯನ್ನು ವಜಾಗೊಳಿಸಿದೆ,ಪ್ರಕರಣದ ತನಿಖೆ ನಡೆಸಿದ ತನಿಖಾ ಸಂಸ್ಥೆ ಇದರಲ್ಲಿ ತೇಜ್ ಪ್ರತಾಪ್ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿತ್ತು.
ಹಿಂದೂಸ್ತಾನ್ ದೈನಂದಿನ ಪತ್ರಿಕೆ ಸಿವಾನ್ ಬ್ಯೂರೋ ಮುಖ್ಯಸ್ಥ ರಾಜ್ದೇವ್ ರಂಜನ್ ಅವರನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಹತ್ಯೆ ಮಾಡಲಾಗಿತ್ತು. ಸಿವಾನ್ ಜೈಲಿನಲ್ಲಿದ್ದ ಆರೋಪಿ ಮೊಹಮದ್ ಶಹಾಬುದ್ದೀನ್ ಅವನ ಚಟುವಟಿಕೆಗಳನ್ನು ಬಹಿರಂಗ ಪಡಿಸಿದ್ದರು.
ತೇಜ ಪ್ರತಾಪ್ ಅವರ ಪಾತ್ರವಿದ್ದು, ಈ ಸಂಬಂಧ ತನಿಖೆ ನಡೆಸಬೇಕೆಂದು ಆಶಾ ರಂಜನ್ ನ್ಯಾಯಾಲಯದ ಮೆಟ್ಟಿಲೇರಿದ್ದರು.