ಲಖನೌ: ಉತ್ತರ ಪ್ರದೇಶ ರಾಜ್ಯಸಭೆ ಚುನಾವಣೆಯಲ್ಲಿಅಡ್ಡಮತದಾನ ಮಾಡಿದ ಬಿಎಸ್ ಪಿ ಶಾಸಕ ಅನಿಲ್ ಕುಮಾರ್ ಸಿಂಗ್ ರನ್ನು ಪಕ್ಷದ ಮುಖ್ಯಸ್ಥೆ ಮಾಯಾವತಿ ಅಮಾನತು ಮಾಡಿದ್ದಾರೆ.
ರಾಜ್ಯಸಭೆಯಲ್ಲಿ ಪಕ್ಷದ ಆದೇಶ ಉಲ್ಲಂಘಿಸಿ ಬಿಜೆಪಿ ಪರ ಅಡ್ಡಮತದಾನ ಮಾಡಿದ ಹಿನ್ನಲೆಯಲ್ಲಿ ಶಾಸಕ ಅನಿಲ್ ಕುಮಾರ್ ಸಿಂಗ್ ವಿರುದ್ದ ಬಿಎಸ್ ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಶಿಸ್ತು ಕ್ರಮ ಕೈಗೊಂಡಿದ್ದಾರೆ. ಶಿಸ್ತು ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಶಾಸಕ ಅನಿಲ್ ಕುಮಾರ್ ಸಿಂಗ್ ರನ್ನು ಪಕ್ಷದಿಂದ ಅಮಾನತು ಮಾಡಿದ್ದಾರೆ.
ನಿನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಎಸ್ ಪಿ ಶಾಸಕ ಅನಿಲ್ ಕುಮಾರ್ ಸಿಂಗ್ ಬ್ಯಾಲೆಟ್ ಪೇಪರ್ ನಲ್ಲಿ ಬಿಜೆಪಿ ಗುರುತಿಗೆ ಟಿಕ್ ಮಾಡಿ ಮತ ಹಾಕಿದ್ದರು. ಈ ವೇಳೆ ಮಾತನಾಡಿದ ಅವರು ಪ್ರಸ್ತುತ ನಾನು ಮಾತ್ರ ಬಿಜೆಪಿ ಮತ ನೀಡಿದ್ದು, ಇತರರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದರು.