ನವದೆಹಲಿ: ದಿನಕ್ಕೊಂದು ಬ್ಯಾಂಕ್ ವಂಚನೆ ಪ್ರಕರಣ ಬಯಲಿಗೆ ಬರುತ್ತಿದ್ದು, ಐಡಿಬಿಐ ಬ್ಯಾಂಕ್ ಗೆ 445 ಕೋಟಿ ರುಪಾಯಿ ವಂಚಿಸಿದ ಆರೋಪದ ಮೇಲೆ ಬ್ಯಾಂಕ್ ಮಾಜಿ ಜನರಲ್ ಮ್ಯಾನೇಜರ್ ಹಾಗೂ ಇತರೆ 30 ಮಂದಿ ವಿರುದ್ಧ ಸಿಬಿಐ ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದೆ.
ನಕಲಿ ದಾಖಲೆಗಳ ಆಧಾರದ ಮೇಲೆ ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಪಡೆಯುವ ಮೂಲಕ ಮತ್ತು ಮೀನುಗಾರಿಕೆ ಸಾಲಗಳನ್ನು ಪಡೆಯುವ ಮೂಲಕ ಬ್ಯಾಂಕ್ 32 ಕೋಟಿ ರುಪಾಯಿ ವಂಚಿಸಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ದಾಖಲೆಗಳ ಆಧಾರದ ಮೇಲೆ 192 ಕೋಟಿ ರುಪಾಯಿ ಸಾಲ ಪಡೆಯಲಾಗಿದೆ ಎಂದು ಸಿಬಿಐ ಆರೋಪಿಸಿದೆ.
ನಕಲಿ ದಾಖಲೆ ಮತ್ತು ಭದ್ರತೆ ನೀಡಿ ಮಾಜಿ ಜನರಲ್ ಮ್ಯಾನೇಜರ್ ಬಟ್ಟು ರಾಮ್ ರಾವ್ ಅವರೊಂದಿಗೆ ಸೇರಿ 21 ಸಮೂಹ ಸಂಸ್ಥೆಗಳು 2009-2010, 2010-11 ಮತ್ತು 2011-2012ರಲ್ಲಿ ಒಟ್ಟು 98 ಕೋಟಿ ರುಪಾಯಿ ಸಾಲ ಪಡೆಯಲಾಗಿದೆ ಎಂದು ಸಿಬಿಐ ದೂರಿದೆ.