ಕೇರಳ ಐಎಸ್ ಪ್ರಕರಣ: ಯಾಸ್ಮೀನ್ ಅಹ್ಮದ್ ಗೆ 7 ವರ್ಷಗಳ ಕಠಿಣ ಸೆರೆವಾಸ

17 ಮಂದಿ ಸದಸ್ಯರೊಡನೆ ಕಾಸರಗೋಡಿನಿಂದ ಅಪ್ಘಾನಿಸ್ತಾನಕ್ಕೆ ವಲಸೆ ಹೋಗಲು ಸಂಚು ರೂಪಿಸಿದ್ದ ಬಿಹಾರ ಮೂಲದ ಯಾಸ್ಮೀನ್ ಅಹಮದ್ ಗೆ ಎನ್ಐಎ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೊಚ್ಚಿ: 17 ಮಂದಿ ಸದಸ್ಯರೊಡನೆ ಕಾಸರಗೋಡಿನಿಂದ ಅಪ್ಘಾನಿಸ್ತಾನಕ್ಕೆ ವಲಸೆ ಹೋಗಲು ಸಂಚು ರೂಪಿಸಿದ್ದ  ಬಿಹಾರ ಮೂಲದ ಯಾಸ್ಮೀನ್  ಅಹಮದ್ ಗೆ ಎನ್ಐಎ  ಕೋರ್ಟ್  7 ವರ್ಷಗಳ ಕಠಿಣ ಸೆರೆವಾಸ ವಿಧಿಸಿದೆ.
ವಿವಿಧ ದಂಡ ಸಂಹಿತೆಗಳಡಿ ಪ್ರಕರಣ ದಾಖಲಿಸಿಕೊಂಡಿದ್ದ ರಾಷ್ಟ್ರೀಯ ತನಿಖಾ ದಳ 25 ಸಾವಿರ ರು, ದಂಡದ ಜೊತೆಗೆ 7 ವರ್ಷ ಸೆರೆಮನೆ ವಾಸ ವಿಧಿಸಿದೆ. ಒಂದು ವೇಳೆ ದಂಡ ಕಟ್ಟಲು ವಿಫಲವಾದರೇ ಮೂರು ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ಸೂಚಿಸಿದೆ.
ಐಎಸ್ ಸೇರಲು ತೆರಳುತ್ತಿದ್ದ ಯಾಸ್ಮಿನ್ ಮತ್ತು 17 ಮಂದಿಯನ್ನು 2016 ರ ಜುಲೈ ತಿಂಗಳಿನಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ  ಎನ್ ಐ ಎ ತಂಡ ವಶಕ್ಕೆ ತೆಗೆದುಕೊಂಡಿತ್ತು. ನಂತರ ತನಿಖೆ ಆರಂಭಿಸಿತ್ತು. ಅಬ್ದುಲ್ ರಶೀದ್ ಮತ್ತು ಯಾಸ್ಮೀನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com