ಯಾವುದೇ ರಾಜಕೀಯ ಪಕ್ಷ ಸತ್ಯಾಗ್ರಹ ದತ್ತ ಸುಳಿಯಲು ಬಿಡಲ್ಲ- ಅಣ್ಣಾ ಹಜಾರೆ

ರಾಮಲೀಲಾ ಮೈದಾನದಲ್ಲಿ ನಿನ್ನೆಯಿಂದ ಉಪವಾಸ ಸತ್ಯಾಗ್ರಹ ಸತ್ಯಾಗ್ರಹ ಆರಂಭಿಸಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಯಾವುದೇ ರಾಜಕೀಯ ಪಕ್ಷ ಅಥವಾ ಗುಂಪು ಪಾಲ್ಗೊಳ್ಳಲು ಸತ್ಯಾಗ್ರಹದಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ
ಅಣ್ಣಾ ಹಜಾರೆ
ಅಣ್ಣಾ ಹಜಾರೆ

ದೆಹಲಿ : ರಾಮಲೀಲಾ ಮೈದಾನದಲ್ಲಿ ನಿನ್ನೆಯಿಂದ   ಉಪವಾಸ ಸತ್ಯಾಗ್ರಹ  ಸತ್ಯಾಗ್ರಹ ಆರಂಭಿಸಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಯಾವುದೇ ರಾಜಕೀಯ ಪಕ್ಷ ಅಥವಾ  ಗುಂಪು ಪಾಲ್ಗೊಳ್ಳಲು  ಸತ್ಯಾಗ್ರಹದಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.


ಈ ಅಭಿಯಾನಕ್ಕೆ ಕೈಜೋಡಿಸುವವರು ಯಾವುದೇ ರಾಜಕೀಯ ಪಕ್ಷ ಅಥವಾ ಗುಂಪಿಗೆ ಸೇರಲ್ಲ, ಅಥವಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ದೇಶ, ಸಮಾಜಕ್ಕಾಗಿ ಸೇವೆ ಮಾಡುತ್ತೇನೆ ಎಂದು ಸಂಬಂಧಿತ ರಾಜ್ಯದಿಂದ ಅಫಿಡವಿಟ್ ತರಬೇಕು, ಅಲ್ಲದೇ ಉತ್ತಮ ವ್ಯಕ್ತಿತ್ವ ಹೊಂದಿರಬೇಕು ಎಂದು ಅವರು ಹೇಳಿದ್ದಾರೆ.

ಏಳು ವರ್ಷಗಳ ಬಳಿಕ ಅಣ್ಣಾ ಹಜಾರೆ ಮತ್ತೆ ಭ್ರಷ್ಟಾಚಾರಿ ವಿರೋಧಿ ಆಂದೋಲನವನ್ನು ಆರಂಭಿಸಿದ್ದಾರೆ.ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು, ಮತ್ತು ಸುಖದೇವ್ ಅವರು ಹುತಾತ್ಮರಾದ ದಿನದಂದೇ ಹೋರಾಟ ಆರಂಭಿಸಿದ್ದಾರೆ.

 ಎಲ್ಲಾ ರಾಜಕೀಯ ನಾಯಕರು ವಂಚಕರಾಗಿದ್ದಾರೆ. ನಾನಾ ಸಮಸ್ಯೆಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಅವರ ಸಮಸ್ಯೆ ಬಗೆಹರಿಸುವಲ್ಲಿ ಮುಖಂಡರು ಮುಂದಾಗುತ್ತಿಲ್ಲ. ತಮ್ಮ ಜೀವ ಇರುವವರೆಗೂ ಹೋರಾಟ ಮುಂದುವರೆಸುವುದಾಗಿ ಅವರು ಹೇಳಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com