

ನವದೆಹಲಿ: ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಪ್ರಸಾರವಾದ ಸ್ವಲ್ಪ ಹೊತ್ತಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾಡುತ್ತಿರುವ ತ್ರಿಕೋನಾಸನ ಯೋಗವನ್ನು ತೋರಿಸುವ ತ್ರಿಡಿ ಆನಿಮೇಷನ್ ವಿಡಿಯೊವನ್ನು ಬಿಡುಗಡೆಮಾಡಲಾಗಿದೆ.
ಮನ್ ಕಿ ಬಾತ್ ನಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತಾವು ಯೋಗ ಶಿಕ್ಷಕನಲ್ಲ, ಆದರೆ ಜನರು ನನ್ನನ್ನು ಆ ರೀತಿ ಬಿಂಬಿಸಿದ್ದಾರೆ. ನಾನು ತ್ರಿಕೋನಾಸನವನ್ನು ಮಾಡುವ ತ್ರಿಡಿ ವಿಡಿಯೊವನ್ನು ಬಿಡುಗಡೆ ಮಾಡಲಾಗುತ್ತಿದ್ದು ಅದನ್ನು ನಾನು ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.
ಯೋಗ ಇತ್ತೀತಿನ ವರ್ಷಗಳಲ್ಲಿ ಸಾಮೂಹಿಕ ಚಳವಳಿಯಾಗಿ ಮಾರ್ಪಾಡಾಗಿದೆ. ಯೋಗ ಮೂಲಕ ನಾನು ದೇಶದ ಮನೆಮನೆಗಳಿಗೆ ತಲುಪಿದ್ದೇನೆ ಎಂದಿದ್ದಾರೆ.