ಸಾಂದರ್ಭಿಕ ಚಿತ್ರ
ದೇಶ
ಉತ್ತರ ಪ್ರದೇಶ : ದರೋಡೆಕೋರರನ ಹತ್ಯೆ, ಎಕೆ -47 ವಶ
ಉತ್ತರ ಪ್ರದೇಶದ ನೋಯ್ಡಾದಲ್ಲಿ ಪೊಲೀಸರು ಎನ್ ಕೌಂಟರ್ ನಡೆಸಿಅಪರಾಧಿಯೊಬ್ಬನನ್ನು ಹತ್ಯೆಗೈಯಿದಿದ್ದಾರೆ. ಈತನ ತಲೆಗೆ ಒಂದು ಲಕ್ಷ ರೂಪಾಯಿ ಇನಾಮ್ ಘೋಷಿಸಲಾಗಿತ್ತು.
ನೋಯ್ಡಾ : ಉತ್ತರ ಪ್ರದೇಶದ ನೋಯ್ಡಾದಲ್ಲಿ ಪೊಲೀಸರು ಎನ್ ಕೌಂಟರ್ ನಡೆಸಿ ಅಪರಾಧಿಯೊಬ್ಬನನ್ನು ಹತ್ಯೆಗೈದಿದ್ದಾರೆ. ಈತನ ತಲೆಗೆ ಒಂದು ಲಕ್ಷ ರೂಪಾಯಿ ಇನಾಮ್ ಘೋಷಿಸಲಾಗಿತ್ತು.
ಶ್ರವಣ್ ಚೌದರಿ ಹತ್ಯೆಯಾದ ಆರೋಪಿ. ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಈತನನ್ನು ಸ್ಥಳೀಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ನೋಯ್ಡಾ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.
ಸ್ಥಳದಲ್ಲಿದ್ದ ಎಕೆ-47 ಬಂದೂಕನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.ನೋಯ್ಡಾ ಹಾಗೂ ದೆಹಲಿಯಲ್ಲಿ ಹಲವು ಹತ್ಯೆ ಪ್ರಕರಣಗಳಲ್ಲಿ ಆರೋಪಿ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ