ತಂತ್ರಜ್ಞಾನದ ಬಗ್ಗೆ ರಾಹುಲ್ ಗೆ ಶೂನ್ಯ ಜ್ಞಾನ ಎಂಬುದು ಸಾಬೀತು: ಬಿಜೆಪಿ

ರಾಹುಲ್ ಆರೋಪದಲ್ಲಿ ಹುರುಳಿಲ್ಲ. ಬಳಕೆದಾರರಿಗೆ ಯಾವ ಮಾಹಿತಿ ಅಗತ್ಯ ಎಂಬುದನ್ನು ವಿಶ್ಲೇಷಿಸಿ, ಆ ಮಾಹಿತಿಯನ್ನಷ್ಟೇ ಅವರಿಗೆ ದೊರಕುವಂತೆ ಮಾಡಲು ಈ ದತ್ತಾಂಶ ವಿಶ್ಲೇಷಣೆ ಮಾಡಲಾಗುತ್ತಿದೆ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಮೋ ಆ್ಯಪ್ ಮೂಲಕ ದತ್ತಾಂಶ ಸೋರಿಕೆಯಾಗಿದೆ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಹುಲ್ ಆರೋಪದಲ್ಲಿ ಹುರುಳಿಲ್ಲ. ಬಳಕೆದಾರರಿಗೆ ಯಾವ ಮಾಹಿತಿ ಅಗತ್ಯ ಎಂಬುದನ್ನು ವಿಶ್ಲೇಷಿಸಿ, ಆ ಮಾಹಿತಿಯನ್ನಷ್ಟೇ ಅವರಿಗೆ ದೊರಕುವಂತೆ ಮಾಡಲು ಈ ದತ್ತಾಂಶ ವಿಶ್ಲೇಷಣೆ ಮಾಡಲಾಗುತ್ತಿದೆ ಎಂದು ಹೇಳಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, 'ಕಾಂಗ್ರೆಸ್‌ ಅಧ್ಯಕ್ಷನಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷೆ ಮಾಡಿರಲಿಲ್ಲ. ಭಾರತದಲ್ಲಿ ನಡೆಯುತ್ತಿರುವ ಒಳ್ಳೆಯ ಕೆಲಸಗಳ ಬಗ್ಗೆ ತಿಳಿದುಕೊಳ್ಳಲು ರಾಹುಲ್‌ ಅವರು ನಮೋ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಲಿ ಎಂದು  ಹೇಳಿದೆ. ಅಂತೆಯೇ ನಮೋ ಆ್ಯಪ್‌ ಒಂದು ವಿಶಿಷ್ಟಆ್ಯಪ್‌. ಬಳಕೆದಾರರ ಯಾವುದೇ ಮಾಹಿತಿಯನ್ನು ಬಯಸದೆಯೇ ಗೆಸ್ಟ್‌ ಮೋಡ್‌ನಲ್ಲಿ ಬಳಸಲು ಅವಕಾಶ ಮಾಡಿಕೊಡುತ್ತದೆ. ಸಂದರ್ಭೋಚಿತ ಮತ್ತು ವಿಷಯಾಧರಿತ ಸಂದರ್ಭಗಳಲ್ಲಿ ಮಾತ್ರವೇ ಅದು ಗ್ರಾಹಕರ ಮಾಹಿತಿ ಬಯಸುತ್ತದೆ. ಹೀಗಾಗಿ ರಾಹುಲ್‌ ಆರೋಪ ಸುಳ್ಳು. ಈ ಸಂದರ್ಭದಲ್ಲಿ ನೀವು ಕೂಡಾ ನಮೋ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ಭಾರತದಲ್ಲಿ ಏನೆಲ್ಲಾ ಒಳ್ಳೆಯ ಕೆಲಸ ಆಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ ಎಂದು ರಾಹುಲ್ ಕಾಲೆಳೆದಿದೆ.
ಬಳಕೆದಾರರಿಗೆ ಯಾವ ಮಾಹಿತಿ ಅಗತ್ಯ ಎಂಬುದನ್ನು ವಿಶ್ಲೇಷಿಸಿ, ಆ ಮಾಹಿತಿಯನ್ನಷ್ಟೇ ಅವರಿಗೆ ದೊರಕುವಂತೆ ಮಾಡಲು ಈ ದತ್ತಾಂಶ ವಿಶ್ಲೇಷಣೆ ನಡೆಸಲಾಗುತ್ತಿದೆ. ಇದು ದತ್ತಾಂಶ ಸೋರಿಕೆ ಅಲ್ಲ. ಬಳಕೆದಾರರ ವೈಯಕ್ತಿಕ ಮಾಹಿತಿ ನೀಡುವಂತೆ ಆ್ಯಪ್‌ ಕೇಳುವುದೇ ಇಲ್ಲ.  ಈ ಆ್ಯಪ್‌ನಲ್ಲಿ ಬಳಕೆದಾರರನ್ನು ‘ಅತಿಥಿ’ (ಗೆಸ್ಟ್‌) ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇಲ್ಲಿ ಅನುಮತಿ ಪಡೆದುಕೊಳ್ಳುವ ಅಥವಾ ಯಾವುದೇ ಮಾಹಿತಿ ನೀಡುವ ಅಗತ್ಯ ಇಲ್ಲ. ಸಾಂದರ್ಭಿಕ ಮತ್ತು ನಿರ್ದಿಷ್ಟ ಅನುಮತಿಗಳು ಮಾತ್ರ ಬೇಕಾಗುತ್ತವೆ.
ಉದಾಹರಣೆಗೆ, ಸೆಲ್ಫಿ ಅಭಿಯಾನದಲ್ಲಿ ಭಾಗವಹಿಸುವವರ ಕ್ಯಾಮೆರಾ ಮತ್ತು ಅಥವಾ ಫೋಟೊ ಗ್ಯಾಲರಿಗೆ ಪ್ರವೇಶಿಸಲು ಅನುಮತಿ ನೀಡಬೇಕಾಗುತ್ತದೆ. ಬಳಕೆದಾರರು ತಮ್ಮ ಇ–ಮೇಲ್‌ ವಿಳಾಸ ಮತ್ತು ಹುಟ್ಟಿದ ದಿನಾಂಕ ಕೊಟ್ಟರೆ ಅಂಥವರಿಗೆ ಪ್ರಧಾನಿಯಿಂದ ಹುಟ್ಟುಹಬ್ಬದ ಶುಭಾಶಯ ಬರುತ್ತದೆ. ಹಾಗಾಗಿ ಎಲ್ಲ ಮಾಹಿತಿಯೂ ಆ್ಯಪ್‌ ಗೆ ದೊರೆಯಬೇಕು ಎಂಬ ಯಾವುದೇ ನಿಬಂಧನೆ ಇಲ್ಲ. 'ಫ್ರೆಂಚ್‌ ಟ್ವಿಟರ್‌' ಬಳಕೆದಾರ ಬಹಿರಂಗಪಡಿಸಿರುವ ಮಾಹಿತಿ ಅವರೇ ತಮ್ಮ ಫೋನ್‌ ನಲ್ಲಿ ಸಲ್ಲಿಸಿದ ಮಾಹಿತಿಯಾಗಿದೆ. ಹಾಗಾಗಿ ಇದು ಸೋರಿಕೆ ಅಲ್ಲ. ಅವರು ನೀಡಿದ ಮಾಹಿತಿ ಅಲ್ಲದೆ ಬೇರೆ ಮಾಹಿತಿ ಅವರಿಗೆ ದೊರಕುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com