ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮೀಡಿಯಾ ಬ್ಯಾರನ್ ಪೀಟರ್ ಮುಖರ್ಜಿಯಾ ಅವರನ್ನು ಮಾ. 31ರವರೆಗೆ ಸಿಬಿಐ ವಶಕ್ಕೆ ಒಪ್ಪಿಸಿ ದೆಹಲಿ ನ್ಯಾಯಾಲಯವುಸೋಮವಾರ ಆದೇಶ ಹೊರಡಿಸಿದೆ.
ಇದಕ್ಕೂ ಮುನ್ನ ತನಿಖಾ ದಳವು ಹೆಚ್ಚುವರಿ ತನಿಖೆಗಾಗಿ ಮುಖರ್ಜಿಯಾ ಅವರನ್ನು ಐದು ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.
ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ಸಹಾಯ ಪಡೆದು ಐಎನ್ಎಕ್ಸ್ ಮಿಡಿಯಾ ಮಾಲೀಕರಾದ ಮುಖರ್ಜಿಯಾ ಫಾರಿನ್ ಇನ್ವೆಸ್ಟ್ಮೆಂಟ್ ಪ್ರೋಮೋಷನ್ ಬೋರ್ಡ್ (ಎಫ್ಐಪಿಬಿ) ಅನುಮೋದನೆಯನ್ನು ಪಡೆಯಲು ಲಂಚ ನೀಡಿದ್ದರು.
ಅದಾಗ್ಯೂ ಮಾರ್ಚ್ 23 ರಂದು ಪ್ರಕರಣದ ಪ್ರಮುಖ ಆರೋಪಿಗಳಾದ ಕಾರ್ತಿ ಚಿದಂಬರಂ ಅವರಿಗೆ 10 ಲಕ್ಷ ರೂ ಮುಚ್ಚಳಿಕೆ ಪತ್ರದ ಆಧಾರದ ಮೇಲೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.