'ಡಿಲೀಟ್ ನಮೋ ಆ್ಯಪ್' ಅಭಿಯಾನದ ಬಳಿಕ ಆ್ಯಪ್ ಜನಪ್ರಿಯತೆ ಹೆಚ್ಚಾಯ್ತು!

ಅಮೆರಿಕಕ್ಕೆ ದತ್ತಾಂಶ ಸೋರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರಂಭಿಸಿದ್ದ ಡಿಲೀಟ್ ನಮೋ ಆ್ಯಪ್ ಅಭಿಯಾನದ ಬಳಿಕ ನಮೋ ಆ್ಯಪ್ ಜನಪ್ರಿಯತೆ ಹಚ್ಚಾಗಿದೆ ಎಂದು ಬಿಜೆಪಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಅಮೆರಿಕಕ್ಕೆ ದತ್ತಾಂಶ ಸೋರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರಂಭಿಸಿದ್ದ ಡಿಲೀಟ್ ನಮೋ ಆ್ಯಪ್ ಅಭಿಯಾನದ ಬಳಿಕ ನಮೋ ಆ್ಯಪ್ ಜನಪ್ರಿಯತೆ ಹಚ್ಚಾಗಿದೆ ಎಂದು ಬಿಜೆಪಿ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ನಮೋ ಆ್ಯಪ್‌ ಬಗ್ಗೆ ಭಯ ನೋಡಿದರೆ ತಮಾಷೆ ಅನಿಸುತ್ತದೆ. ರಾಹುಲ್‌ ಬಾಟ್‌ಗಳು (ರೊಬೋಟ್‌) #ಡಿಲೀಟ್‌ ನಮೋಆ್ಯಪ್‌ ಅಭಿಯಾನ ಮಾಡಿದ ಬಳಿಕ ಆ್ಯಪ್‌ನ ಜನಪ್ರಿಯತೆ ಹೆಚ್ಚಾಗಿದೆ ಎಂದು ಬಿಜೆಪಿ ರಾಹುಲ್ ಗಾಂಧಿ ಕಾಲೆಳೆದಿದೆ.
ನಮಗೆಲ್ಲರಿಗೂ ತಿಳಿದೇ ಇದೆ.. ಯಾವುದೇ ವಿಚಾರದಲ್ಲೂ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರಿಗೆ ಸರಿಸಮವಲ್ಲ. ನಮೋ ಆ್ಯಪ್ ಕುರಿತಂತೆ ಅವರು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ. ನಿಜ ಹೇಳಬೇಕು ಎಂದರೆ ಈ ಆರೋಪದ ಮೂಲಕ ರಾಹುಲ್ ತಂತ್ರಜ್ಞಾನದ ಕುರಿತು ತಮಗೆ ಯಾವುದೇ ರೀತಿಯ ಜ್ಞಾನವಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಆದರೆ ರಾಹುಲ್ ಗಾಂಧಿ #ಡಿಲೀಟ್ ನಮೋ ಆ್ಯಪ್ ಅಭಿಯಾನ ಆರಂಭಿಸುವ ಮೂಲಕ ಆ್ಯಪ್ ನ ಜನಪ್ರಿಯತೆ ಹೆಚ್ಚಿಸಿದ್ದು, ಕೇವಲ 24 ಗಂಟೆಗಳಲ್ಲಿ ಲಕ್ಷಾಂತರ ಹೊಸ ಬಳಕೆದಾರರು ಆ್ಯಪ್ ಡೌನ್ಲೋಡ್ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com