ಬಹುಪತ್ನಿತ್ವ, ನಿಕಾ ಹಲಾಲ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿದ್ದ ಅರ್ಜಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್

ಮುಸ್ಲಿಂ ಸಮುದಾಯದಲ್ಲಿನ ಬಹುಪತ್ನಿತ್ವ ಹಾಗೂ ನಿಕಾ ಹಲಾಲ್ ಒಪ್ಪಂದಕ್ಕೆ ಸಾಂವಿಧಾನಿಕ ಮಾನ್ಯತೆ ಪರಾಮರ್ಶೆಗಾಗಿ ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದ್ದು, ಕಾನೂನು ಆಯೋಗ ಮತ್ತು ಕೇಂದ್ರಸರ್ಕಾರದಿಂದ ಪ್ರತಿಕ್ರಿಯೆ ಕೋರಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ : ಮುಸ್ಲಿಂ ಸಮುದಾಯದಲ್ಲಿನ ಬಹುಪತ್ನಿತ್ವ ಹಾಗೂ ನಿಕಾ ಹಲಾಲ್  ಒಪ್ಪಂದಕ್ಕೆ  ಸಾಂವಿಧಾನಿಕ ಮಾನ್ಯತೆ  ಪರಾಮರ್ಶೆಗಾಗಿ  ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದ್ದು, ಕಾನೂನು ಆಯೋಗ ಮತ್ತು ಕೇಂದ್ರಸರ್ಕಾರದಿಂದ ಪ್ರತಿಕ್ರಿಯೆ ಕೋರಿದೆ.

ತ್ರಿವಳಿ ತಲಾಕ್ ನಿಷೇಧ ನಂತರ ಬಹುಪತ್ನಿತ್ವ, ನಿಕಾ ಹಲಾಲ್ ಮಾನ್ಯತೆ ವಿವಾದವನ್ನು  ಐವರು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನಿಕ ಪೀಠಕ್ಕೆ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ನೇತೃತ್ವದ ಪೀಠ ವರ್ಗಾಯಿಸಿದೆ.

ಬಹುಪತ್ನಿತ್ವ ಮತ್ತು ನಿಕಾ ಹಲಾಲ್ ಗೆ ಸಂವಿಧಾನಿಕ ಮಾನ್ಯತೆ ಸಂಬಂಧ ಪರಾಮರ್ಶೆಗಾಗಿ  ಐವರು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನಿಕ ಪೀಠ ರಚಿಸಲಾಗಿದೆ ಎಂದು ನ್ಯಾಯಾಧೀಶರಾದ  ಎ.ಎಂ. ಖಾನ್ವಿಲ್ ಕರ್ ಮತ್ತು ಡಿ. ಚಂದ್ರಚೂಡ್ ಅವರಿದ್ದ ಪೀಠ ಇಂದು ಹೇಳಿದೆ.

ಬಹುಪತ್ನಿತ್ವ ಪದ್ಧತಿಯಲ್ಲಿ ಮುಸ್ಲಿಂರು ಐವರು ಹೆಂಡತಿಯನ್ನು ಹೊಂದಲು ಅವಕಾಶವಿದೆ. ನಿಕಾ ಹಲಾಲ್  ಪುನರ್ ವಿವಾಹಕ್ಕೆ ಸಂಬಂಧಿಸಿದ ಕಾನೂನಾಗಿದೆ. ತಲಾಖ್ ಪಡೆದ ಮಹಿಳೆಯು ತನ್ನ ಮೊದಲ ಪತಿಯನ್ನು ಮತ್ತೆ ವಿವಾಹವಾಗಲು ಕೆಲ ನಿಯಮಗಳನ್ನು ರೂಪಿಸಲಾಗಿದೆ.

ತಲಾಖ್ ಪಡೆದ ಬಳಿಕ ಇನ್ನೊಬ್ಬರೊಂದಿಗೆ ವಿವಾಹವಾಗಿ ದಾಂಪತ್ಯವನ್ನು ಅಂತ್ಯಗೊಳಿಸಬೇಕು. ಅಂದರೆ, ಆ ಎರಡನೇ ಮದುವೆಯನ್ನು ಮುರಿದುಕೊಂಡಾಗ
ಅಥವಾ ಎರಡನೇ ಪತಿ ಮೃತಪಟ್ಟಾಗ ಮಾತ್ರ ಮೊದಲ ಪತ್ನಿಯನ್ನು ಮಹಿಳೆಯು ಪುನರ್ ವಿವಾಹವಾಗಬಹುದು.ಇದನ್ನೇ ನಿಕಾ ಹಲಾಲ ಎಂದು ಕರೆಯುತ್ತಾರೆ.

ತ್ರಿವಳಿ ತಲಾಕ್  ಅಸಂವಿಧಾನಿಕವಾದದ್ದು ಎಂದು ಕಳೆದ ವರ್ಷ ಸಂವಿಧಾನಿಕ ಪೀಠ 3:2  ಬಹಮತದಿಂದ ತೀರ್ಪು ನೀಡಿತ್ತು.

ಲಿಂಗ ಸಮಾನತೆ , ಸಮಾನತೆ ಹಕ್ಕು ಉಲ್ಲಂಘನೆ ಸೇರಿದಂತೆ ಹಲವು ವಿಧಗಳಲ್ಲಿ ಜಾರಿಯಲ್ಲಿರುವ  ಪದ್ಧತಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಪ್ರಮುಖ ಮೂರು ಅರ್ಜಿಗಳ ವಿಚಾರಣೆಯನ್ನು ಈ ಪೀಠ ನಡೆಸಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com