ನೋಯ್ಡಾ: ನಕ್ಸಲ್ ಕಮಾಂಡರ್ ಸುದೀರ್ ಭಗತ್ ನನ್ನು ನೋಯ್ಡಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಹಲವು ಬಾಂಬ್ ಸ್ಫೋಟ, ಫ್ಯಾಕ್ಟರಿಗಳಲ್ಲಿ ಸ್ಫೋಟ ಹಾಗೂ ಹಲವು ಕೊಲೆ ಪ್ರಕರಣ ಮತ್ತು ದೊಂಬಿಗಳ ಪ್ರಮುಖ ಆರೋಪಿಯಾಗಿದ್ದ. ಸುಧೀರ್ ಭಗತ್ ನನ್ನು ಹಿಡಿದುಕೊಟ್ಟವರಿಗೆ 50 ಸಾವಿರ, ರು ಬಹುಮಾನ ಕೂಡ ಘೋಷಿಸಲಾಗಿತ್ತು.
ಬಿಹಾರದ ಮುಝಾಫರ್ ನಗರದ ನಿವಾಸಿಯಾಗಿದ್ದ ಆತ 2015 ರಿಂದ ನೋಯ್ಡಾದ ಹರೋಲಾ ಸೆಕ್ಟರ್ ನಲ್ಲಿ ವಾಸವಾಗಿದ್ದ. ಜೊತೆಗೆ ಮೋದಿ ನಗರದಲ್ಲಿರುವ ದಿವ್ಯಾ ಜ್ಯೋತಿ ಕಾಲೇಜಿನ ಬಿ,ಟೆಕಿ ವಿದ್ಯಾರ್ಥಿ ಎಂಬ ನಕಲಿ ಗುರುತಿನ ಚೀಟಿ ಹೊಂದಿದ್ದ. ಬಂಧಿತ ಆರೋಪಿಯಿಂದ ರಿವಾಲ್ವರ್ ಕೂಡ ವಶ ಪಡಿಸಿಕೊಂಡಿದ್ದಾರೆ.