ನವದೆಹಲಿ: ವಜ್ರ ವ್ಯಾಪಾರಿ ನೀರವ್ ಮೋದಿಗೆ ಸಾಲ ನೀಡಿರುವ ಕುರಿತು ದಾಕಲೆ ಬಹಿರಂಗ ಪಡಿಸಲು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿರಾಕರಿಸಿದೆ.
13,000 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೀರವ್ ಮೋದಿಗೆ ಬ್ಯಾಂಕ್ ನಿಡಿದ್ದ ಸಾಲದ ಮಾಹಿತಿ ಒದಗಿಸುವಂತೆ ಮುಂಬೈ ಮೂಲದ ಆರ್ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಅರ್ಜಿ ಸಲ್ಲಿಸಿದ್ದರು.
ಆರ್ಟಿಐ ಕಾಯಿದೆ 8 (1) (ಎಚ್) ವಿಭಾಗದಡಿಯಲ್ಲಿ ಅವರು ನೀರವ್ ಮೋದಿ ಅವರಿಗೆ ನಿಡಿದ ಸಾಲದ ಮಾಹಿತಿ ಒದಗಿಸುವಂತೆ ಕೋರಿದ್ದು ಬ್ಯಾಂಕ್ ಆ ಮಾಹಿತಿ ನೀಡಲು ನಿರಾಕರಿಸಿದೆ.
ಸಭೆಯಲ್ಲಿ ನಡೆದ ಚರ್ಚೆಗಳು, ಅಜೆಂಡಾ, ನೀರವ್ ಮೋದಿ ಸಾಲಕ್ಕಾಗಿ ಇಟ್ಟ ಬೇಡಿಕೆ, ಬ್ಯಾಂಕಿನಿಂದ ಮಂಜೂರಾದ ಮೊತ್ತ ಸೇರಿದಂತೆ ಎಲ್ಲ ದಾಖಲೆಗಳ ವಿವರಗಳನ್ನು ಅವರು ಕೇಳಿದ್ದರು.