ಭೂ ಹಗರಣದಲ್ಲಿ ಕಪಿಲ್ ಸಿಬಲ್ ಭಾಗಿಯಾಗಿದ್ದಾರೆ: ಸ್ಮೃತಿ ಇರಾನಿ

ಹವಾಲ ಹಣ ವರ್ಗಾವಣೆಯಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡ ಕಪಿಲ್ ಸಿಬಲ್ ಮತ್ತು ಅವರ ಪತ್ನಿ ಒಳಗೊಂಡಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ...
ಕಪಿಲ್ ಸಿಬಲ್
ಕಪಿಲ್ ಸಿಬಲ್
ನವದೆಹಲಿ: ಹವಾಲ ಹಣ ವರ್ಗಾವಣೆಯಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡ ಕಪಿಲ್ ಸಿಬಲ್ ಮತ್ತು ಅವರ ಪತ್ನಿ ಒಳಗೊಂಡಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ. 
ಮಾಧ್ಯಮಗಳ ವರದಿ ಪ್ರಕಾರ, ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕಪಿಲ್ ಸಿಬಲ್ ಅವರು ಕೇಂದ್ರ ಕಾನೂನು ಸಚಿವರಾಗಿದ್ದಾಗ ನವದೆಹಲಿ ಪುರಸಭೆ ವ್ಯಾಪ್ತಿಗೆ ಬರುವ 89 ಕೋಟಿ ರುಪಾಯಿ ಬೆಲೆಬಾಳುವ ಆಸ್ತಿಗೆ ಕಡಿಮೆ ಮೊತ್ತವನ್ನು ನೀಡಿ ಖರೀದಿಸಿತ್ತು ಎಂದು ಆರೋಪಿಸಿದ್ದಾರೆ. 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಮೃತಿ ಇರಾನಿ ಅವರು ಹವಾಲ ಹಣ ವರ್ಗಾವಣೆ ಮಾಡುವ ವ್ಯಕ್ತಿಯೊಂದಿಗೆ ಕಪಿಲ್ ಸಿಬಲ್ ಅವರು ನಂಟನ್ನು ಹೊಂದಿದ್ದರು. ಯುಪಿಎ ಸರ್ಕಾರದವಧಿಯಲ್ಲಿ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ(ಸಿಬಿಐ) ತನಿಖೆ ನಡೆಸಿದ್ದು ಇದರಲ್ಲಿ ದಕ್ಷಿಣ ಆಫ್ರಿಕಾ ಪತ್ರಕರ್ತನೊರ್ವ ಸಿಕ್ಕಿಬಿದ್ದದ್ದು ಆತನಿಂದ ಕಪಿಲ್ ಸಿಬಲ್ ಮತ್ತು ಆತನ ಪತ್ನಿಗೆ ಗ್ರಾಂಡ್ ಕ್ಯಾಸ್ಟೆಲ್ಲೊ ಪ್ರೈವೇಟ್ ಲಿಮಿಟೆಡ್ ನ ಮಾಲೀಕತ್ವ ಸಿಕ್ಕಿತ್ತು ಎಂದು ಹೇಳಿದ್ದಾರೆ. 
ಹವಾಲ ಹಣ ವರ್ಗಾವಣೆ ಕಾಂಗ್ರೆಸ್ ನಾಯಕರ ಸ್ವಾಭಾವವಾಗಿದೆ. ಸಿಬಲ್ ಮತ್ತು ಅವರ ಪತ್ನಿ ಈ ಸಂಸ್ಥೆಯಲ್ಲಿ 100 ರಷ್ಟು ಶೇರುಗಳನ್ನು ಹೊಂದಿದ್ದು ಇಬ್ಬರು ತಲಾ 50 ಶೇರುಗಳನ್ನು ಹೊಂದಿದ್ದು ಈ ಸಂಸ್ಥೆ ಕೊಳ್ಳಲು ಕೇವಲ 1 ಲಕ್ಷ ರುಪಾಯಿ ಮಾತ್ರ ನೀಡಿದ್ದಾರೆ ಎಂದು ಸ್ಮೃತಿ ಆರೋಪಿಸಿದ್ದಾರೆ.
ಸ್ಮೃತಿ ಇರಾನಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿಬಲ್ ಹವಾಲ ಹಣ ವರ್ಗಾವಣೆ ಎಂಬುದರ ಅರ್ಥ ತಿಳಿಯದವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಹೌದು ನಾನು ಕಂಪನಿಯನ್ನು ಕೊಂಡುಕೊಂಡಿದ್ದೇನೆ. ಅದರಲ್ಲೇನು ತಪ್ಪ? ನನ್ನ ಕಷ್ಟಪಟ್ಟು ದುಡಿದ ಹಣವನ್ನು ಅದಕ್ಕೆ ಕೊಟ್ಟಿದ್ದೇನೆ. ಅದಕ್ಕೆ ತೆರಿಗೆ ಸಹ ಕಟ್ಟಿದ್ದೇನೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com