ಡೆಲಿವರಿ ಬಾಯ್‌ಗೆ 20 ಬಾರಿ ಇರಿದು ದೇಹವನ್ನು ಚರಂಡಿಗೆ ಎಸೆದ ಕಿರಾತಕಿ, ಯಾಕೆ ಗೊತ್ತ!

ಸರಿಯಾದ ಸಮಯಕ್ಕೆ ಮೊಬೈಲ್ ಡೆಲಿವರಿ ಮಾಡಲಿಲ್ಲ ಎಂಬ ಕಾರಣಕ್ಕೆ ಡೆಲಿವರಿ ಬಾಯ್‌ಗೆ 20ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ...
ಡೆಲಿವರಿ ಬಾಯ್(ಸಂಗ್ರಹ ಚಿತ್ರ)
ಡೆಲಿವರಿ ಬಾಯ್(ಸಂಗ್ರಹ ಚಿತ್ರ)
ನವದೆಹಲಿ: ಸರಿಯಾದ ಸಮಯಕ್ಕೆ ಮೊಬೈಲ್ ಡೆಲಿವರಿ ಮಾಡಲಿಲ್ಲ ಎಂಬ ಕಾರಣಕ್ಕೆ ಡೆಲಿವರಿ ಬಾಯ್‌ಗೆ 20ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. 
ಆನ್ ಲೈನ್ ಶಾಪಿಂಗ್ ಫ್ಲೀಪ್ ಕಾರ್ಟ್ ನಲ್ಲಿ 30 ವರ್ಷದ ಕಮಲ್ ದೀಪ್ ಎಂಬುವರು 11 ಸಾವಿರ ರು. ಮೌಲ್ಯದ ಮೊಬೈಲ್ ಫೋನನ್ನು ಬುಕ್ ಮಾಡಿದ್ದರು. ಡೆಲಿವರಿ ಬಾಯ್ ಕೇಶವ್, ಕಮಲ್ ದೀಪ್ ಗೆ ಕರೆ ಮಾಡಿ ವಿಳಾಸ ಕೇಳಿದ್ದಾನೆ. ನಂತರ ಆಕೆ ಅವನಿಗೆ ಪದೇ ಪದೇ ಫೋನ್ ಮಾಡಿದ್ದಾಳೆ. ಕೆಲವೇ ಕ್ಷಣದಲ್ಲಿ ಬರುವುದಾಗಿ ಹೇಳಿ ಲೇಟಾಗಿ ಕೇಶವ್ ಹೋಗಿದ್ದಕ್ಕೆ ಕೋಪಗೊಂಡ ಕಮಲ್ ದೀಪ್ ಹಾಗೂ ಆತನ ಸಹೋದರ ಕೇಶವ್ ಕೊರಳಿಗೆ ಷೂ ಲೇಸಿನಿಂದ ಹಿಡಿದು ಚಾಕುವಿನಿಂದ ಇರಿದಿದ್ದಾರೆ. 
ನಂತರ ಆತನ ಬಳಿಯಿದ್ದ 40 ಸಾವಿರ ಹಣ ಹಾಗೂ ಡೆಲಿವರಿ ನೀಡಲು ತಂದಿದ್ದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ನಂತರ ಬೈಕ್ ಮೂಲಕ ಆತನನ್ನು ಚಂದನ್ ವಿಹಾರ್ ಪ್ರದೇಶದ ಕೊಳಚೆ ನೀರು ಕಾಲುವೆಗೆ ಎಸೆದಿದ್ದಾರೆ. 
ಕೊಳಚೆ ನೀರು ಪೈಪ್ ನಿಂದ ರಕ್ತ ಬರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದ ಕೇಶವ್ ನನ್ನು ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 
ಕೇಶವ್ ನಿಂದ ಮಾಹಿತಿ ಪಡೆದ ಪೊಲೀಸರು ಆರೋಪಿಗಳಾದ ಕಮಲ್ ದೀಪ್ ಹಾಗೂ ಜಿತೇಂದರ್ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com