ಸೋರಿಕೆಯಾಗಿರುವ ಹತ್ತನೇ ತರಗತಿ ಸಂಸ್ಕೃತ ಪ್ರಶ್ನೆಪತ್ರಿಕೆ ' ನಕಲಿ '

ಇತ್ತೀಚಿನ ಸಿಬಿಎಸ್ ಇ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹತ್ತನೆ ತರಗತಿ ಸಂಸ್ಕೃತ ಪ್ರಶ್ನೆಪತ್ರಿಕೆ ನಕಲಿ ಎಂದು ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ ಶಾಲಾ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಇತ್ತೀಚಿನ ಸಿಬಿಎಸ್ ಇ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಹಿನ್ನೆಲೆಯಲ್ಲಿ  ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ  ಹತ್ತನೆ ತರಗತಿ ಸಂಸ್ಕೃತ ಪ್ರಶ್ನೆಪತ್ರಿಕೆ  ನಕಲಿ ಎಂದು ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ ಶಾಲಾ  ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ.

ಸಾಮಾಜಿಕ ಜಾಲತಾಣದಲ್ಲಿ ಯೂ ಟ್ಯೂಬ್ ಲಿಂಕ್ ನಲ್ಲಿ  ಹತ್ತನೇ ತರಗತಿ ಸಂಸ್ಕೃತ ವಿಷಯದ ಪ್ರಶ್ನೆ ಪತ್ರಿಕೆ ಹರಿದಾಡುತ್ತಿದ್ದು, ಇದು ಈ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ ಎಂಬ ಬಗ್ಗೆ ಪರೀಕ್ಷಿಸುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.

ವಿದ್ಯಾರ್ಥಿಗಳು ಇದನ್ನು ನಂಬಂದಂತೆ ಅಥವಾ ಅದರ ವೆಬ್ ಸೈಟ್ ಗಳಲ್ಲಿ ಪರೀಕ್ಷಿಸುವಂತೆ ಸಿಬಿಎಸ್ ಇ ಹೇಳಿಕೆಯಲ್ಲಿ ತಿಳಿಸಿದೆ.

12 ನೇ ತರಗತಿಯ ಅರ್ಥಶಾಸ್ತ್ರ ಮತ್ತು 10 ನೇ ತರಗತಿಯ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಭಾರೀ ಪ್ರತಿಭಟನೆಗೆ ಕಾರಣವಾಗಿರುವ ಬೆನ್ನಲ್ಲೇ, ಈ ಎರಡು ವಿಷಯಗಳಿಗೆ ಸಿಬಿಎಸ್ ಇ ಮರು ಪರೀಕ್ಷೆ ನಡೆಸಲು ನಿರ್ಧರಿಸಿದ್ದು, ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಏಪ್ರಿಲ್ 25 ರಂದು 12 ನೇ ತರಗತಿಯ ಅರ್ಥಶಾಸ್ತ್ರ ವಿಷಯದ ಮರುಪರೀಕ್ಷೆ ನಡೆಯಲಿದೆ ಆದರೆ, ಹತ್ತನೇ ತರಗತಿಯ ಗಣಿತ ವಿಷಯದ ಮರುಪರೀಕ್ಷೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com