'ನೋಕ್ಕು ಕೂಲಿ' ಎಂದರೆ 'ನೋಟಕ್ಕೆ ಕೂಲಿ' ಎಂದರ್ಥ. ಯಾವುದೇ ಕೆಲಸ ಮಾಡದೇ ಇದ್ದರೂ ಕೂಲಿ ಪಡೆಯುವುದು. ಉದಾಹರಣೆಗೆ, ಸಾಮಾನುಗಳನ್ನು ಹೇರಿಕೊಂಡು ಲಾರಿಯೊಂದು ಬಂದರೆ, ಅದರ ಮಾಲೀಕ ತನ್ನ ಕಾರ್ಮಿಕರಿಂದ ಅದನ್ನು ಇಳಿಸುವಂತಿಲ್ಲ. ಟ್ರೇಡ್ ಯೂನಿಯನ್ ಗಳ ಸದಸ್ಯರಿಂದಲೇ ಅದನ್ನು ಅನ್ ಲೋಡ್ ಮಾಡಿಸಬೇಕು. ಅದಕ್ಕವರು ಕೇಳುವ ಕೂಲಿ ಕೊಡಲೇಬೇಕು. ಒಂದು ವೇಳೆ ಮಾಲೀಕ ತನ್ನದೇ ಕಾರ್ಮಿಕರ ಸಹಾಯದಿಂದ ಅದನ್ನು ಇಳಿಸಿದಲ್ಲಿ ಅದನ್ನು ನೋಡುತ್ತ ನಿಲ್ಲುವ ಟ್ರೇಡ್ ಯೂನಿಯನ್ ಗಳಿಗೆ ಅವರು ಹೇಳಿದಷ್ಟು ಹಣವನ್ನು ಸಂದಾಯ ಮಾಡಲೇಬೇಕಾಗಿತ್ತು. ಇಂದಿನಿಂದ ಈ ಪದ್ಧತಿಗೆ ಬ್ರೇಕ್ ಹಾಕಲಾಗಿದೆ.