ಮಧ್ಯಪ್ರದೇಶ: ಎದೆ ಮೇಲೆ ಜಾತಿ ಗುರುತು ಆಯ್ತು, ಈಗ ಒಂದೇ ಕೋಣೆಯಲ್ಲಿ ಪುರುಷ, ಮಹಿಳೆಗೆ ವೈದ್ಯಕೀಯ ಪರೀಕ್ಷೆ!

ಮಧ್ಯಪ್ರದೇಶ ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಆಕಾಂಕ್ಷಿಗಳ ಎದೆ ಮೇಲೆ ಜಾತಿ ಗುರುತು ಆಯ್ತು, ಈಗ ಪುರುಷ ಮತ್ತು ಮಹಿಳಾ ಆಕಾಂಕ್ಷಿಗಳ ವೈದ್ಯಕೀಯ ಪರೀಕ್ಷೆಯನ್ನು ಒಂದೇ ಕೋಣೆಯಲ್ಲಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಭೋಪಾಲ್: ಮಧ್ಯಪ್ರದೇಶ ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಆಕಾಂಕ್ಷಿಗಳ ಎದೆ ಮೇಲೆ ಜಾತಿ ಗುರುತು ಆಯ್ತು, ಈಗ ಪುರುಷ ಮತ್ತು ಮಹಿಳಾ ಆಕಾಂಕ್ಷಿಗಳ ವೈದ್ಯಕೀಯ ಪರೀಕ್ಷೆಯನ್ನು ಒಂದೇ ಕೋಣೆಯಲ್ಲಿ ನಡೆಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. 
ಈ ವಿಡಿಯೋ ತುಣುಕಿನಲ್ಲಿ ಪುರುಷ ವೈದ್ಯರು ಮಹಿಳಾ ಹುದ್ದೆ ಆಕಾಂಕ್ಷಿಯ ಎತ್ತರವನ್ನು ಪರೀಕ್ಷಿಸುತ್ತಿದ್ದಾರೆ. ಆಕೆಯ ಹಿಂದೆ ಇಬ್ಬರು ಪುರುಷ ಆಕಾಂಕ್ಷಿಗಳು ಬರೀ ಮೈಯಲ್ಲಿ ನಿಂತಿದ್ದಾರೆ. 
ಈ ಘಟನೆ ಕುರಿತು ತನಿಖೆಗೆ ಆಗ್ರಹಿಸಿರುವ ಕಲೆಕ್ಟರ್ ಇಳಯರಾಜ ಅವರು ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದ ದೇವೇಂದ್ರ ಶರ್ಮಾರನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ. 
ಎತ್ತರ ಪರೀಕ್ಷೆ ಮಾಡುವ ಉಪಕರಣ ಇಲ್ಲದ ಕಾರಣ ಮಹಿಳಾ ವೈದ್ಯರು ಮಹಿಳಾ ಆಕಾಂಕ್ಷಿಗಳನ್ನು ಪುರುಷ ಆಕಾಂಕ್ಷಿಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದ್ದ ಕೋಣೆಗೆ ಕರೆದೊಯ್ದಿದ್ದರು ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com