ಆಧಾರ್ ಅಂಕಿಅಂಶಗಳು ಸೋರಿಕೆಯಾಗಿಲ್ಲ: ಯುಐಡಿಎಐ ಸ್ಪಷ್ಟನೆ

ಸರ್ವರ್ ನಿಂದ ಆಧಾರ್ ಅಂಕಿಅಂಶಗಳ ಸೋರಿಕೆ ಖಂಡಿತವಾಗಿಯೂ ಆಗಿಲ್ಲ ಎಂದು ಭಾರತೀಯ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸರ್ವರ್ ನಿಂದ ಆಧಾರ್ ಅಂಕಿಅಂಶಗಳ ಸೋರಿಕೆ ಖಂಡಿತವಾಗಿಯೂ ಆಗಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ತಿಳಿಸಿದೆ.

ಆಧಾರ್.ಇಪಿಎಫ್ಒಸರ್ವಿಸ್.ಕಾಂ ವೆಬ್ ಸೈಟ್ ನಿಂದ ಅಂಕಿಅಂಶಗಳು ಸೋರಿಕೆಯಾಗಿದೆ ಎಂಬ ಮಾಧ್ಯಮ ವರದಿಗಳಿಗೆ ಪ್ರಾಧಿಕಾರ ಈ ಸ್ಪಷ್ಟನೆ ನೀಡಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪ್ರಾಧಿಕಾರ, ಈ ವೆಬ್ ಸೈಟ್ ಪ್ರಾಧಿಕಾರಕ್ಕೆ ಸೇರಿದ್ದಾಗಿಲ್ಲ. ಪ್ರಾಧಿಕಾರದ ಸರ್ವರ್ ನಿಂದ ಆಧಾರ್ ದಾಖಲೆಗಳು ಸೋರಿಕೆಯಾಗಿಲ್ಲ. ಆಧಾರ್ ದಾಖಲೆಗಳು, ಅಂಕಿಅಂಶಗಳು ಅದರ ವೆಬ್ ಸೈಟ್ ನಲ್ಲಿ ಸುರಕ್ಷಿತವಾಗಿದೆ ಎಂದು ಯುಐಡಿಎಐ ತಿಳಿಸಿದೆ.

ಉದ್ಯೋಗಿಗಳ ಭವಿಷ್ಯನಿಧಿ ಯೋಜನೆಯಡಿ ಕೆಲವು ವರ್ಗದ ಉದ್ಯೋಗಿಗಳ ರಹಸ್ಯ ದಾಖಲೆಗಳನ್ನು ಹ್ಯಾಕರ್ ಗಳು ಕದ್ದಿದ್ದು ಇದರಿಂದ ಆಧಾರ್ ಅಂಕಿಅಂಶ ಪೋರ್ಟಲ್ ನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಪತ್ರಿಕೆಯೊಂದರಲ್ಲಿ ಬಂದ ವರದಿಗೆ ಸಂಬಂಧಿಸಿದಂತೆ ಈ ಸ್ಪಷ್ಟೀಕರಣ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com