ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖ: ಪ್ರಧಾನಿ ಮೋದಿ

ಮಹಿಳೆಯರ ವಿಕಾಸದಿಂದ, ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖದತ್ತ ದೇಶ ಸಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ಮಹಿಳೆಯರ ವಿಕಾಸದಿಂದ, ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖದತ್ತ ದೇಶ ಸಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ. 
ನಮೋ ಆ್ಯಪ್ ಮೂಲಕ ಕರ್ನಾಟಕದ ಬಿಜೆಪಿ ಮಹಿಳಾ ಮೋರ್ಚಾದೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿಯವರು, ಮಹಿಳೆಯರ ನೇತೃತ್ವದಲ್ಲಿ ಮಹಿಳಾ ವಿಕಾಸವೆಂಬ ಮಂತ್ರದೊಂದಿಗೆ ಬಿಜೆಪಿ ಕೆಲಸ ಮಾಡುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಅತ್ಯಂತ ಪ್ರಮುಖವಾದದ್ದು, ನಮ್ಮ ಎಲ್ಲಾ ಕಾರ್ಯಕ್ರಮದಲ್ಲೂ ಮಹಿಳೆಯರಿಗೆ ಪ್ರಥಮ ಸ್ಥಾನ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. 
ಇಂದು ನಮ್ಮ ದೇಶ ಮಹಿಳಾ ವಿಕಾಸದಿಂದ, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖದತ್ತ ಸಾಗುತ್ತಿದೆ. ಮಹಿಳೆಯರ ವಿಕಾಸವೆಂಬ ಮಂತ್ರದೊಂದಿಗೆ ಬಿಜೆಪಿ ಕೆಲಸ ಮಾಡುತ್ತಿದೆ. ಮಹಿಳೆಯರಿಗೆ ಸಮಾನ ಹಕ್ಕು ದೊರಕಿಸಿಕೊಡುವತ್ತ ನಮ್ಮ ಪಕ್ಷ ಕೆಲಸ ಮಾಡುತ್ತಿದೆ. ನಮ್ಮ ಸಂಪುಟದಲ್ಲಿ ರಕ್ಷಣಾ ಮಂತ್ರಿ ಹಾಗೂ ವಿದೇಶಾಂಗ ಸಚಿವೆ ಇಬ್ಬರೂ ಮಹಿಳೆಯರೇ ಆಗಿದ್ದು, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿದೆ. ಮಹಿಳೆಯರು ಎಲ್ಲರಿಗೂ ಸರಳ ಭಾಷೆಯಲ್ಲಿ ತಿಳಿಸುತ್ತಾರೆ. ಹೀಗಾಗಿ ಮಹಿಳೆಯರು ಅಭಿವೃದ್ಧಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಾರೆಂದು ಪ್ರಶಂಸಿಸಿದ್ದಾರೆ. 
ಬಳಿಕ ಮಹಿಳೆಯರಿಗಾಗಿ ಜಾರಿಗೆ ತಂದ ಯೋಜನೆಗಳ ಪ್ರಸ್ತಾಪ ಮಾಡಿರುವ ಮೋದಿಯವರು, ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನದ ಪ್ರಸ್ತಾಪಿಸಿ, ಇದರಿಂದ ಮಹಿಳಾ ತಾರತಮ್ಯ ನಿವಾರಣೆಯಾಗಿದೆ ಎಂದು ತಿಳಿಸಿದ್ದಾರೆ. 
ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ನೀಡಲಾಗಿದೆ. ಜನಧನ್ ಯೋಜನೆ ಅಡಿಯಲ್ಲಿ 16.42ಕೋಟಿ ಫಲಾನುಭವಿಗಳಿದ್ದಾರೆ. ಸ್ಟ್ಯಾಂಡ್ ಆಫ್ ಇಂಡಿಯಾ ಮೂಲಕ 8000 ಕೋಟಿಗೂ ಅಧಿಕ ಸಾಲ ನೀಡಲಾಗಿದೆ. ಮುದ್ರಾ ಯೋಜನೆಯಡಿ 9 ಕೋಟಿ ಮಹಿಳಾ ಫಲಾನುಭವಿಗಳಿದ್ದಾರೆಂದಿದ್ದಾರೆ. 
ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಏರಿಕೆ, 50ಕ್ಕಿಂತ ಅಧಿಕ ಕೆಲಸಗಾರರಿರುವ ಕಡೆ ಕಡ್ಡಾಯ ಶಿಶು ಗೃಹ ವ್ಯವಸ್ಥೆ, ಹೆಣ್ಣುಮಗುವಿನ ಭವಿಷ್ಯದ ಸುರಕ್ಷತೆಗಾಗಿ ಸುಕನ್ಯಾ ಸಮೃದ್ಧಿ ಯೋಜನೆ, ಸುರಕ್ಷಿತ ಮಾತೃತ್ವ ಅಭಿಯಾನದಡಿ ಉಚಿತ ಆರೋಗ್ಯ ಸೇವೆ ಹಾಗೂ ಕರ್ನಾಟಕದಲ್ಲಿ 9.34 ಲಕ್ಷ ಜನರಿಗೆ ಉಚಿತ ಎಲ್'ಪಿಜಿ ಸೇವೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com