'ಪ್ರಚಾರಕ್ಕಾಗಿ ದಲಿತರೊಂದಿಗೆ ಆಹಾರ ಸೇವಿಸುವ ’ನಾಟಕ’ ನಿಲ್ಲಿಸಿ’: ಬಿಜೆಪಿ ನಾಯಕರಿಗೆ ಮೋಹನ್ ಭಾಗ್ವತ್'

ದಲಿತರೊಂದಿಗೆ ಆಹಾರ ಸೇವಿಸುವ ನಾಟಕವನ್ನು ನಿಲ್ಲಿಸುವಂತೆ ಬಿಜೆಪಿ ನಾಯಕರಿಗೆ ಆರ್ ಎಸ್ಎಸ್ ಮುಖಂಡ ಮೋಹನ್ ಭಾಗ್ವತ್ ಹೇಳಿದ್ದಾರೆ.
ಮೋಹನ್ ಭಾಗ್ವತ್
ಮೋಹನ್ ಭಾಗ್ವತ್
ನವದೆಹಲಿ: ದಲಿತರೊಂದಿಗೆ ಆಹಾರ ಸೇವಿಸುವ ನಾಟಕವನ್ನು ನಿಲ್ಲಿಸುವಂತೆ ಬಿಜೆಪಿ ನಾಯಕರಿಗೆ ಆರ್ ಎಸ್ಎಸ್ ಮುಖಂಡ ಮೋಹನ್ ಭಾಗ್ವತ್ ಹೇಳಿದ್ದಾರೆ. 
ವಿಶ್ವಹಿಂದೂ ಪರಿಷತ್ ನ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಮೋಹನ್ ಭಾಗ್ವತ್, ಕಠಿಣ ಶಬ್ದಗಳಲ್ಲಿ ಬಿಜೆಪಿ ನಾಯಕರನ್ನು ಟೀಕಿಸಿರುವ ಮೋಹನ್ ಭಾಗ್ವತ್, ದಲಿತರೊಂದಿಗೆ ಆಹಾರ ಸ್ವೀಕರಿಸುವ ನಾಟಕ ನಿಲ್ಲಿಸಿ, ಆ ಸಮುದಾಯದೊಂದಿಗೆ ನಿರಂತರ ಸಂಪರ್ಕ ಬೆಳೆಸಿಕೊಳ್ಳಿ, ಜಾತಿಯ ಸಂಕೋಲೆಗಳಿಂದ ಕಳಚಿಕೊಳ್ಳುವುದಕ್ಕೆ ಕೇವಲ ಸಾಂದರ್ಭಿಕ, ಸಾಂಕೇತಿಕ  ನಡೆಗಳಿಂದ ಜಾತಿಯ ಸಂಕೋಲೆಗಳನ್ನು ಕಳಚುವುದಕ್ಕೆ ಸಾಧ್ಯವಿಲ್ಲ ಎಂದೂ ಆರ್ ಎಸ್ ಎಸ್ ಮುಖ್ಯಸ್ಥರು ತಿಳಿಸಿದ್ದಾರೆ. 
ಸಭೆಯಲ್ಲಿ ವಿಶ್ವಹಿಂದೂ ಪರಿಷತ್ ನಾಯಕರು ಸಾಮಾಜಿಕ ಸೌಹಾರ್ದತೆಯ ಬಗ್ಗೆಯೂ ಮಾತನಾಡಿದ್ದಾರೆ. ಇದೇ ವೇಳೆ ದಲಿತ ಕುಟುಂಬಗಳನ್ನು ಭೇಟಿ ಮಾಡಿ, ಅವರೊಂದಿಗಿನ ಸಂಪರ್ಕವನ್ನು ಹೆಚ್ಚಿಸಿಕೊಳ್ಳುವಂತೆ ಬಿಜೆಪಿಯ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಸೂಚನೆ ಬಗ್ಗೆಯೂ ಮೋಹನ್ ಭಾಗ್ವತ್ ಮಾತನಾಡಿದ್ದು, ಕೇವಲ ಪ್ರಚಾರಕ್ಕಾಗಿ ದಲಿತ ದಲಿತರೊಂದಿಗೆ ಆಹಾರ ಸೇವಿಸುವುದು ಉತ್ತಮ ಬೆಳವಣಿಗೆಯಲ್ಲ ಎಂದಿದ್ದಾರೆ. 
ಉತ್ತರ ಪ್ರದೇಶ ಸಚಿವರೊಬ್ಬರು ದಲಿತರ ಮನೆಗೆ ಭೇಟಿ ನೀಡಿದ್ದಾಗ ತಮ್ಮ ಆಹಾರವನ್ನು ತಾವೇ ತಂದಿದ್ದರು ಎಂಬ ಬಗ್ಗೆ ವರದಿಗಳು ಪ್ರಕಟವಾಗಿರುವ ಬೆನ್ನಲ್ಲೇ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗ್ವತ್  ಪ್ರಚಾರಕ್ಕಾಗಿ ದಲಿತರೊಂದಿಗೆ ಆಹಾರ ಸೇವಿಸುವ ’ನಾಟಕ’ ನಿಲ್ಲಿಸಿ ಎಂಬ ಹೇಳಿಕೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com