ತುರ್ತು ಯುದ್ಧಕ್ಕೆ ತಯಾರಾಗಿ ಸೇನಾ ಮುಖ್ಯಸ್ಥರಿಗೆ ಅಜಿತ್ ದೋವಲ್ ಸೂಚನೆ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸೇನಾ ಮುಖ್ಯಸ್ಥರಿಗೆ ಯಾವುದೇ ತುರ್ತು ಯುದ್ಧ ಸ್ಥಿತಿಗೆ ಸೇನೆಯನ್ನು ಸಜ್ಜುಗೊಳಿಸುವಂತೆ ಸೂಚಿಸಿದ್ದಾರೆ...
ಅಜಿತ್ ದೋವಲ್
ಅಜಿತ್ ದೋವಲ್
ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸೇನಾ ಮುಖ್ಯಸ್ಥರಿಗೆ ಯಾವುದೇ ತುರ್ತು ಯುದ್ಧ ಸ್ಥಿತಿಗೆ ಸೇನೆಯನ್ನು ಸಜ್ಜುಗೊಳಿಸುವಂತೆ ಸೂಚಿಸಿದ್ದಾರೆ. 
ನೂತನ ರಕ್ಷಣಾ ಯೋಜನಾ ಸಮಿತಿ(ಡಿಪಿಸಿ)ಯ ಮೊದಲ ಸಭೆಯಲ್ಲಿ ಮೂರು ವಿಭಾಗದ ಸೇನಾ ಮುಖ್ಯಸ್ಥರಿಗೂ ಸೂಚನೆ ನೀಡಲಾಗಿದೆ. ಸಭೆಯಲ್ಲಿ ವಾಯು ಸೇನೆ, ನೌಕೆ ಮತ್ತು ಭೂಸೇನೆಯ ಮುಖ್ಯಸ್ಥರು, ರಕ್ಷಣೆ, ವಿದೇಶಾಂಗ ಹಾಗೂ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. 
ಇದೇ ವೇಳೆ ಅನವಶ್ಯಕ ಸೇನಾ ತುಕಡಿಯನ್ನು ಕಡಿತಗೊಳಿಸಲು ನಿರ್ದೇಶನ ನೀಡಲಾಗಿದೆ. ಜತೆಗೆ ಲಭ್ಯವಿರುವ ಆರ್ಥಿಕ ಸಂಪನ್ಮೂಲವನ್ನು ಆದ್ಯತೆ ಮೇರೆಗೆ ವ್ಯಯಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. 
ಕಳೆದ ಬಜೆಟ್ ಅವಧಿಯಲ್ಲೇ ಸೇನಾ ಮುಖ್ಯಸ್ಥರು ಸಂಪನ್ಮೂಲ ಹಂಚಿಕೆ ಕುರಿತು ಧ್ವನಿ ಎತ್ತಿದ್ದರು. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರ ಡಿಪಿಸಿ ರಚಿಸಿದೆ. ಹೀಗಾಗಿ ಮೊದಲ ಸಭೆಯಲ್ಲಿಯೇ ಸಂಪನ್ಮೂಲ ಬಳಕೆ ಕುರಿತು ಗಮನ ಕೇಂದ್ರೀಕರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com