ಪರೀಕ್ಷಾ ವೀಕ್ಷಕರು ನನ್ನನ್ನು ಅನುಚಿತ ರೀತಿಯಲ್ಲಿ ನೋಡುತ್ತಿದ್ದರು: ಎನ್ಇಇಟಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿ

ಒಳ ಉಡುಪುಗಳನ್ನು ತೆಗೆದು ಎನ್ಇಇಟಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ತನನ್ನು ಪರೀಕ್ಷಾ ವೀಕ್ಷಕರು ಅನುಚಿತ ರೀತಿಯಲ್ಲಿ ನೋಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಪರೀಕ್ಷಾ ವೀಕ್ಷಕರು ನನ್ನನ್ನು ಅನುಚಿತ ರೀತಿಯಲ್ಲಿ ನೋಡುತ್ತಿದ್ದರು: ಎನ್ಇಇಟಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿ
ಪರೀಕ್ಷಾ ವೀಕ್ಷಕರು ನನ್ನನ್ನು ಅನುಚಿತ ರೀತಿಯಲ್ಲಿ ನೋಡುತ್ತಿದ್ದರು: ಎನ್ಇಇಟಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿ
ಪಾಲಕ್ಕಾಡ್: ಒಳ ಉಡುಪುಗಳನ್ನು ತೆಗೆದು ಎನ್ಇಇಟಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ತನನ್ನು ಪರೀಕ್ಷಾ ವೀಕ್ಷಕರು ಅನುಚಿತ ರೀತಿಯಲ್ಲಿ ನೋಡುತ್ತಿದ್ದರು ಎಂದು ಆರೋಪಿಸಿದ್ದಾರೆ. 
ವಿದ್ಯಾರ್ಥಿನಿಯ ಆರೋಪದ ಆಧಾರದಲ್ಲಿ ಐಪಿಸಿ ಸೆಕ್ಷನ್ 509 ರ ಪ್ರಕಾರ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.  ಪಾಲಕ್ಕಾಡ್ ನ ಕೊಪ್ಪದಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯೂ ಸೇರಿದಂತೆ ಹಲವು ವಿದ್ಯಾರ್ಥಿನಿಯರ ಒಳ ಉಡುಪಿನಲ್ಲಿ ಲೋಹದ ಕೊಕ್ಕೆ ಇದ್ದ ಕಾರಣ ಒಳ ಉಡುಪುಗಳನ್ನು ತೆಗೆದು ಪರೀಕ್ಷೆ ಬರೆದಿದ್ದರು.  
ತಾನು ಪರೀಕ್ಷೆ ಬರೆಯುವ ವೇಳೆ ಪರೀಕ್ಷಾ ವೀಕ್ಷಕರು ತನ್ನನ್ನು ಅನುಚಿತ ರೀತಿಯಲ್ಲಿ ನೋಡುತ್ತಿದ್ದರು. ತನ್ನ ಬಳಿಯೇ ಆಗಾಗ್ಗೆ ಬಂದು ನಿಲ್ಲುತ್ತಿದ್ದರು ಎದೆ ಭಾಗವನ್ನು ನೋಡುತ್ತಿದ್ದರು. ನಾನು ಪ್ರಶ್ನೆಪತ್ರಿಕೆಗಳಿಂದ ತನ್ನನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದೆ ಎಂದು ಹೇಳಿದ್ದಾಗಿ ವಿದ್ಯಾರ್ಥಿನಿಯ ಸಹೋದರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. 
ಪರೀಕ್ಷಾ ಮೇಲ್ವಿಚಾರಕರ ವರ್ತನೆಯಿಂದ ನನ್ನ ಸಹೋದರಿಗೆ ಮಾನಸಿಕವಾಗಿ ಹಿಂಸೆಯಾಗಿದೆ. ಆದ್ದರಿಂದ ಪರೀಕ್ಷೆಯನ್ನೂ ಸರಿಯಾಗಿ ಬರೆಯುವುದಕ್ಕೆ ಸಾಧ್ಯವಾಗಿಲ್ಲ ಎಂದು ವಿದ್ಯಾರ್ಥಿನಿಯ ಸಹೋದರಿ ಹೇಳಿದ್ದಾರೆ.  ಇದೇ ಶಾಲೆಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳೊಂದಿಗೂ ಮಾತುಕತೆ ನಡೆಸುತ್ತಿದ್ದು, ಈ ಬಗ್ಗೆ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com