ಮೇ 30ರಿಂದ 48 ಗಂಟೆಗಳ ಕಾಲ ಮುಷ್ಕರಕ್ಕೆ ಬ್ಯಾಂಕುಗಳ ಒಕ್ಕೂಟ ಕರೆ

ಮೇ 30 ರಂದು ಸುಮಾರು 40 ಲಕ್ಷ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳು 48 ಗಂಟೆಗಳ ಮುಷ್ಕರಕ್ಕೆ ಕರೆ ನೀಡಿರುವುದಾಗಿ ಅಖಿಲ ಭಾರತ ಬ್ಯಾಂಕು ನೌಕರರ ಸಂಘದ ನಾಯಕರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಮೇ 30 ರಂದು ಸುಮಾರು 40 ಲಕ್ಷ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳು 48 ಗಂಟೆಗಳ ಮುಷ್ಕರಕ್ಕೆ ಕರೆ ನೀಡಿರುವುದಾಗಿ  ಅಖಿಲ ಭಾರತ ಬ್ಯಾಂಕು ನೌಕರರ ಸಂಘದ ನಾಯಕರು ತಿಳಿಸಿದ್ದಾರೆ.

ನವೆಂಬರ್ 1, 2017 ರಿಂದ ಬ್ಯಾಂಕು ನೌಕರರ  ವೇತನ ಪರಿಷ್ಕರಣೆಯಾಗಿಲ್ಲ. ಶೀಘ್ರವೇ   ವೇತನ ಪರಿಷ್ಕರಿಸಬೇಕೆಂಬುದು  ಪ್ರಮುಖ ಬೇಡಿಕೆಯಾಗಿದ್ದು, ಮೇ. 30 ರಂದು ಬೆಳಿಗ್ಗೆ 6 ಕ್ಕೆ ಆರಂಭಗೊಳ್ಳುವ ಮುಷ್ಕರ ಜೂನ್ 1 ರಂದು ಬೆಳಿಗ್ಗೆ 6 ಗಂಟೆಗೆ ಅಂತ್ಯಗೊಳ್ಳಿಸಲು  ಬ್ಯಾಂಕುಗಳ ಒಕ್ಕೂಟ ಉದ್ದೇಶಿಸಿದೆ.

ಮುಷ್ಕರದ ಬಗ್ಗೆ ಅಖಿಲ ಭಾರತೀಯ ಅಸೋಸಿಯೇಷನ್   ಬ್ಯಾಂಕುಗಳು ಹಾಗೂ ನವದೆಹಲಿಯ ಕೇಂದ್ರ ಕಾರ್ಮಿಕ ಆಯುಕ್ತರಿಗೆ ನೋಟಿಸ್ ನೀಡಲಾಗಿದೆ ಎಂದು ಅಖಿಲ ಭಾರತೀಯ ಬ್ಯಾಂಕು ನೌಕರರ ಅಸೋಸಿಯೇಷನ್  ಪ್ರಧಾನ ಕಾರ್ಯದರ್ಶಿ ಸಿ. ಹೆಚ್.  ವೆಂಕಟಚಲಂ ತಿಳಿಸಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರದ ಸಿಬ್ಬಂದಿ ಹಾಗೂ  ಅಧಿಕಾರಗಳನ್ನು ಪ್ರತಿನಿಧಿಸುವ ಒಂಬತ್ತು ಒಕ್ಕೂಟಗಳು  ಯುಎಫ್ ಬಿ ಯು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ವೇತನ ಪರಿಷ್ಕರಣೆ ಸಂಬಂಧ ಯುಎಫ್ ಬಿಯು ಹಾಗೂ ಭಾರತೀಯ ಬ್ಯಾಂಕು ಅಸೋಸಿಯೇಷನ್ ನಡುವೆ ಮುಂಬೈಯಲ್ಲಿ ಮೇ 5 ರಂದು ನಡೆದಿದ್ದ ಸಭೆ  ವಿಫಲವಾಗಿತ್ತು.

 ನವೆಂಬರ್ 1 2012ರಿಂದ ಜಾರಿಗೆ ಬರುವಂತೆ  ಒಟ್ಟಾರೇ ವೇತನದಲ್ಲಿ ಶೇ.15 ರಷ್ಟು ಹೆಚ್ಚಿಸಲು ಭಾರತೀಯ ಬ್ಯಾಂಕುಗಳ ಅಸೋಸಿಯೇಷನ್  ಒಪ್ಪಿಗೆ ನೀಡಿತ್ತು. ಆದರೆ, ಇದನ್ನು ಬ್ಯಾಂಕುಗಳ ನೌಕರರ ಒಕ್ಕೂಟ ತಿರಸ್ಕರಿಸಿತ್ತು ಎಂದು ವೆಂಕಟಚಲಂ ಹೇಳಿದ್ದಾರೆ.

ಈ ನಡುವೆ ನವೆಂಬರ್, 1 2017 ಕ್ಕೂ ಮುಂಚೆ  ವೇತನ ಪರಿಷ್ಕರಿಸುವಂತೆ  ಭಾರತೀಯ ಬ್ಯಾಂಕುಗಳ ಅಸೋಸಿಯೇಷನ್ ಗೆ ಸರ್ಕಾರ ಹೇಳಿತ್ತು. ಆದರೆ. ಅದು ಕಾರ್ಯಗತಗೊಳ್ಳದೆ  ವಿಳಂಬವಾಗುತ್ತಲೇ ಇದೆ ಎಂದು ಅವರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com