ಬರೋಬ್ಬರಿ ರೂ.8.64 ಲಕ್ಷ ವಿದ್ಯುತ್ ಬಿಲ್ ನೋಡಿ ಆಘಾತ; ತರಕಾರಿ ವ್ಯಾಪಾರಿ ಆತ್ಮಹತ್ಯೆಗೆ ಶರಣು

ಬರೋಬ್ಬರಿ ರೂ.8.64 ಲಕ್ಷ ವಿದ್ಯುತ್ ಬಿಲ್ ನೋಡಿ ಆಘಾತಗೊಂಡ ತರಕಾರಿ ವ್ಯಾಪಾರಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಭರತ್ ನಗರದಲ್ಲಿ ಗುರುವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಔರಂಗಾಬಾದ್; ಬರೋಬ್ಬರಿ ರೂ.8.64 ಲಕ್ಷ ವಿದ್ಯುತ್ ಬಿಲ್ ನೋಡಿ ಆಘಾತಗೊಂಡ ತರಕಾರಿ ವ್ಯಾಪಾರಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಭರತ್ ನಗರದಲ್ಲಿ ಗುರುವಾರ ನಡೆದಿದೆ. 
ಜಗನ್ನಾಥ್ ನೆಹಾಜಿ ಶೆಲ್ಕೆ (36) ಆತ್ಮಹತ್ಯೆಗೆ ಶರಣಾದ ವ್ಯಾಪಾರಿಯಾಗಿದ್ದಾರೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ರಾಜ್ಯ ವಿದ್ಯುತ್ ಪ್ರಸರಣಾ ಸಂಸ್ಥೆ (ಎಂಎಸ್ಇಡಿಸಿಎಲ್)ಯಿಂದ 55,519 ಯುನಿಟ್ ಬಳಕೆ ಮಾಡಿದ್ದಕ್ಕಾಗಿ, ವ್ಯಾಪಾರಿಗೆ ರೂ.8,64,781 ಮೊತ್ತದ ಬಿಲ್ ಕಳುಹಿಸಿತ್ತು. ಇದರಿಂತ ತೀವ್ರವಾಗಿ ಆಘಾತಗೊಂಡ ವ್ಯಾಪಾರಿ ಹಲವು ಬಾರಿ ಸ್ಥಳೀಯ ಕಚೇರಿಗೆ ಭೇಟಿ ಮೀಟರ್'ನಲ್ಲಿ ಸಮಸ್ಯೆಯಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಇದಕ್ಕೆ ಅಧಿಕಾರಿಗಳು ಯಾವುದೇ ರೀತಿಯ ಸ್ಪಂದನೆಯನ್ನು ನೀಡಿಲ್ಲ. ಇದರಿಂದ ತೀವ್ರವಾಗಿ ಬೇಸತ್ತ ಜಗನ್ನಾಥ್ ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, 6,117.8 ಕೆಡಬ್ಲ್ಯೂಹೆಚ್ ಬದಲಿಗೆ 61, 1478 ಕೆಡಬ್ಲ್ಯೂಹೆಚ್ ಮೀಟರ್ ರೀಡಿಂಗ್ ಪಂಚ್ ಮಾಡಲಾಗಿತ್ತು. ಪರಿಣಾಮ ಶೆಲ್ಕೆಯವರಿಗೆ ಏಪ್ರಿಲ್ ಕೊನೆಯ ವಾರದಲ್ಲಿ ರೂ.8.64 ಲಕ್ಷ ವಿದ್ಯುತ್ ನೀಡಲಾಗಿತೆ. ಶೆಲ್ಕೆಯವರ ವಿದ್ಯುತ್ ಮೀಟರ್ ಅನ್ನು ಪ್ರಸಕ್ತ ವರ್ಷ ಜನವರಿ 10 ರಂದು ಬದಲಾಯಿಸಲಾಗಿತ್ತು. ಮೀಟರ್ ದೋಷಯುಕ್ತವಾಗಿದ್ದರಿಂದಾಗಿ ಈ ರೀತಿಯ ನಡೆದಿಬಹುದು ಎಂದು ಹೇಳಿದ್ದಾರೆ.
ಸಾವಿವೂ ಮುನ್ನ ಜಗನ್ನಾಥ್ ಅವರು ಡೆತ್ ನೋಟ್ ಬರೆದಿಟ್ಟಿದ್ದು, ತಮ್ಮ ಸಾವಿಗೆ ದೊಡ್ಡ ಮೊತ್ತದ ಬಿಲ್ ಕಾರಣ ಎಂದು ಹೇಳಿಕೊಂಡಿದ್ದಾರೆ. ಪ್ರತೀ ತಿಂಗಳು ನಮಗೆ ರೂ.1,000ದಷ್ಟು ವಿದ್ಯುತ್ ಬಿಲ್ ಬರುತ್ತಿತ್ತು ಎಂದು ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com